ಭಕ್ತಿ ಉಕ್ಕಿಸುವ ಕಥಾನಕ ಉಘೇ ಉಘೇ ಮಾದೇಶ್ವರ.!

ಭಕ್ತಿ ಉಕ್ಕಿಸುವ ಕಥಾನಕ ಉಘೇ ಉಘೇ ಮಾದೇಶ್ವರ
ಕಳೆದ ಹಲವಾರು ವರ್ಷಗಳಿಂದ ಜೀ ಕನ್ನಡವಾಹಿನಿ ತನ್ನ ವಿಭಿನ್ನ ನಿರೂಪಣೆಯ ಹಾಗೂ ಹೊಸತನದ ಕಾರ್ಯಕ್ರಮಗಳ ಮೂಲಕ ವಿಕಷಗೆ ಹೆಚ್ಚು ಹೆಚ್ಚು ಹತ್ತಿರವಾಗುತ್ತಿದೆ. ಅದೇ ರೀತಿ ಈಗ ಮಲೆ ಮಾದೇಶ್ವರರ ಕಥಾಹಂದರ ಹೊಂದಿರುವ ಭಕ್ತಿರಸಭರಿತ ಧಾರಾವಾಹಿ ಉಘೇ ಉಘೇ ಮಾದೇಶ್ವರವನ್ನು ಕನ್ನಡ ಪ್ರೇಕ್ಷಕರ ಮುಂದೆ ತರುತ್ತಿದೆ. ಭಾರತದ ಅತಿ ದೀರ್ಘ ಜಾನಪದ ಕಥನಕಾವ್ಯ ಎಂದರೆ ಮಲೆ ಮಾದೇಶ್ವರ ಮಹಾಕಾವ್ಯ. ಇದನ್ನು ಜಾನಪದರು ಏಳು ಹಗಲು, ಏಳು ರಾತ್ರಿ ನಿರಂತರ ಹಾಡುತ್ತಾರೆ. ಜೊತೆಗೆ ಕನ್ನಡದ ಅತಿ ಹೆಚ್ಚು ಕಥನ ಗೀತೆಗಳು, ಭಕ್ತಿ ಗೀತೆಗಳು ಮಾದೇಶ್ವರರ ಕುರಿತೇ ರಚಿತವಾಗಿದೆ. ಮಾದೇಶ್ವರರನ್ನು ತಮ್ಮೊಡನಿರುವ ಶಿವನ ಅಂಶವೆಂದೇ ಭಕ್ತರು ಆರಾಧಿಸುತ್ತ ಬಂದಿರೆ.

ನಂಬಿದವರ ಮನೆಯಲ್ಲಿ ತುಂಬಿ ತುಳುಕುವ ಮಾದೇಶ್ವರರು, ದುಂಡು ಮಾದಪ್ಪ, ಮುದ್ದು ಮಾದಪ್ಪ, ಮಾಯ್ಕಾರ ಮಾದಪ್ಪ, ಧರೆಗೆ ದೊಡ್ಡವರು, ಎಪ್ಪತ್ತೇಳು ಬೆಟ್ಟದ ಒಡೆಯ ಇತ್ಯಾದಿ ಹೆಸರುಗಳಿಂದ ಜನಮಾನಸದಲ್ಲಿ ನೆಲೆಯೂರಿz್ದÁರೆ. ಈಗಲೂ ಪ್ರತಿವರ್ಷ ಕೋಟ್ಯಂತರ ಭಕ್ತರು ಮಲೆ ಮಾದೇಶ್ವರ ಬೆಟ್ಟಕ್ಕೆ ಭೇಟಿ ಕೊಡುತ್ತಾರೆ. ಉಘೇ ಉಘೇ ಎಂದು ಭಕ್ತಿ, ಆವೇಶದಿಂದ ಸ್ತುತಿಸುತ್ತಾರೆ. ಧೂಪ ಹಾಕುತ್ತಾರೆ. ವಿಭೂತಿ ಪ್ರಸಾದ ಪಡೆಯುತ್ತಾರೆ. ತಮ್ಮ ನಂಬಿಕೆಗಳು ನಿಜವಾದ ಉದಾಹರಣೆಗಳನ್ನು ನೀಡುತ್ತಾರೆ.
ಶ್ರವಣನೆಂಬ ಕ್ರೂರಿ ದಾನವ ದೊರೆ ಶಿವನಿಂದ ಸಾವಿಲ್ಲದ ವರ ಪಡೆದು ಕೊಬ್ಬಿ ದೇವತೆಗಳನ್ನು ಬಂಧಿಸುತ್ತಾನೆ. ಕೈಲಾಸವನ್ನೂ ಬಿಡದೇ ಪಾರ್ವತಿಯನ್ನು ಕರೆದೊಯ್ಯುತ್ತಾನೆ. ಪಾರ್ವತಿಯ ಕಣ್ಣೀರು ವರಕೊಟ್ಟ ಶಿವನ ಆಕ್ರೋಶಕ್ಕೆ ಕಾರಣವಾಗುತ್ತದೆ. ಶಿವನ ಜಟೆಯಿಂದ ಚಿಮ್ಮಿದ ಲಿಂಗ ಮುಗಿಲ ತೊಟ್ಟಿಲಲ್ಲಿ ಮಗುವಾಗಿ ತೇಲುತ್ತಾರೆ. ಇತ್ತ ಉತ್ತರಾಜಮ್ಮ ಎಂಬ ಮಕ್ಕಳಿಲ್ಲದ ಶಿವಶರಣೆಯ ಬಂಜೆತನ ನೀಗಲು ಆಕೆಯ ಉದರದಲ್ಲಿ ನೆಲೆಸಿ, ಅಯೋನಿಜರಾಗಿ ಬೆನ್ನು ಸೀಳಿ ಜನಿಸುತ್ತಾರೆ. ಹೀಗೆ ಜನನದಲ್ಲಿಯೇ ಪವಾಡ ಮೆರೆದ ಮಾದೇಶ್ವರರು ಆಗಲೇ ತಾನು ಜನಿಸುತ್ತಿರುವುದು ಶ್ರವಣನ ಸಂಹಾರಕ್ಕೆ ಮತ್ತು ಕೆಟ್ಟವರ ಕಲಿಗಾಲದಲ್ಲಿ ಕಲಿಯನ್ನು ಕಟ್ಟಾಳುವುದಕ್ಕೆ ಎಂದು ಸ್ಪಷ್ಟಪಡಿಸುತ್ತಾರೆ. ಬಾಲ್ಯದಿಂದಲೇ ಪವಾಡಗಳು ಮತ್ತು ದೈವೀಕ ಶಕ್ತಿಗಳನ್ನು ಪ್ರದರ್ಶಿಸುವ ಮಾದೇಶ್ವರರು ಏಳು ವರ್ಷಕ್ಕೇ ಮನೆಬಿಟ್ಟು ಗುರುಗಳೊಂದಿಗೆ ಕಾನನ ಸೇರಿ ಹುಲಿ ಪಳಗಿಸುವುದೂ ಸೇರಿದಂತೆ ಅನೇಕ ವಿದ್ಯೆ ಕಲಿಯುತ್ತಾರೆ. ನಂತರ ಸನ್ಯಾಸ ದೀಕ್ಷೆ ಪಡೆಯುತ್ತಾರೆ. ಅಂತಿಮವಾಗಿ ಶ್ರವಣನ ಸಂಹಾರ ಮಾಡಿ ಮಾದೇಶ್ವರ ಬೆಟ್ಟದಲ್ಲಿ ನೆಲೆಸುತ್ತಾರೆ.
ಈ ಧಾರಾವಾಹಿಯನ್ನು ಸಂಭ್ರಮ, ಸೈನಿಕ, ಸಾರ್ವಭೌಮ, ಅಂಬರೀಶ’ದಂಥ ಹಿಟ್ ಚಿತ್ರಗಳ ನಿರ್ದೇಶಕ ಕೆ.ಮಹೇಶ್ ಸುಖಧರೆ ತಮ್ಮ ಸುಖಧರೆ ಪಿಕ್ಚರ್ಸ್ ಲಾಂಛನದಡಿ ನಿರ್ಮಿಸಿ ನಿರ್ದೇಶಿಸುತ್ತಿz್ದÁರೆ. ಇದೇ ಮೊದಲಬಾರಿಗೆ ಚಿತ್ರ ನಿರ್ಮಾಣ ಸಂಸ್ಥೆಯೊಂದು ಇಂಥ ಮಹಾನ್ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ಭಾರತದ ವಿವಿಧ ಕಡೆಯಿಂದ ನುರಿತ ಕುಶಲ ಕರ್ಮಿಗಳು ಹಾಗೂ ತಂತ್ರಜ್ಞರನ್ನು ಕರೆಸಿ ಅರಮನೆ, ಇಂದ್ರಲೋಕದ ಸೆಟ್ ನಿರ್ಮಿಸಲಾಗಿದೆ. ನವೀನ್ ಕೃಷ್ಣ ಸಂಚಿಕೆ ನಿರ್ದೇಶನದ ಹೊಣೆ ಹೊತ್ತಿರೆ. ಪ್ರಮುಖ ತಾರಾಗಣದಲ್ಲಿ ವಿನಯ್ ಗೌಡ, ಆರ್ಯನ್‍ರಾಜಮಾ. ಅಮೋಘ, ಕೃತಿ, ಚಂದ್ರಶೇಖರ ಶಾಸ್ತ್ರಿ, ತನ್ಮಯಾ, ಶರತ್, ಶ್ರೀಸಂಧ್ಯಾ, ಪದ್ಮನಾಭ, ಅಮೃತಾ ನಾಯ್ಡು, ಭವಾನಿ ಮುಂತಾದವರೆ. ಸೆ. 8ರಿಂದ ಪ್ರತಿ ಶನಿವಾರ-ಭಾನುವಾರ ಸಂಜೆ 6.30ರಿಂದ 7.30ರವರೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ.

This Article Has 1 Comment
  1. Pingback: DevOps Service Provider

Leave a Reply

Your email address will not be published. Required fields are marked *

Translate »
error: Content is protected !!