ಬಿಚ್ಚುಗತ್ತಿ ನಾಯಕ ರಾಜವರ್ಧನ್ ನಟನೆಯ ಹಿರಣ್ಯ ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದೆ.
ಹಿರಣ್ಯ ಸಿನಿಮಾ ಶೂಟಿಂಗ್ ಮುಗಿಸಿದ್ದು, ಗಣೇಶ ಚತುರ್ಥಿಯಂದು ರಾಜವರ್ಧನ್ ಅವರು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರವೀಣ್ ಅವ್ಯುಕ್ತ್ ನಿರ್ದೇಶನದ ಈ ಸಿನಿಮಾ ಮಾಸ್ ಎಂಟರ್ಟೈನರ್ ಆಗಿದೆ.
ನಿರ್ದಯ ಮತ್ತು ಯಾವುದೇ ಭಾವನೆಗಳಿಲ್ಲದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ. ಒಂದೇ ಶೆಡ್ಯೂಲ್‌ನಲ್ಲಿ 75 ದಿನಗಳ ಕಾಲ ಚಿತ್ರೀಕರಣ ನಡೆಸಿರುವುದಾಗಿ ರಾಜವರ್ದನ್ ತಿಳಿಸಿದ್ದಾರೆ.
ಚಿತ್ರವು ಐದು ಫೈಟ್‌ಗಳನ್ನು ಒಳಗೊಂಡಿದೆ. ಸ್ಟಂಟ್ ಮಾಸ್ಟರ್‌ಗಳಾದ ವಿನೋದ್, ಟೈಗರ್ ಶಿವ ಮತ್ತು ಅರ್ಜುನ್ ಕೊರಿಯೊಗ್ರಫಿ ಮಾಡಿದ್ದಾರೆ.
ಹಿರಣ್ಯ ಸಿನಿಮಾವನ್ನು ವಿಘ್ನೇಶ್ವರ ಯು ಮತ್ತು ವಿಜಯ್ ಕುಮಾರ್ ಬಿವಿ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ದಿವ್ಯಾ ಸುರೇಶ್ ಮತ್ತು ರಿಹಾನಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಜೂಡಾ ಸ್ಯಾಂಡಿ ಅವರ ಸಂಗೀತ ಮತ್ತು ಯೋಗೇಶ್ವರನ್ ಅವರ ಛಾಯಾಗ್ರಹಣವಿದೆ.
___

Be the first to comment