Gaalipata 2 Review : ಯಶಸ್ವಿಯಾಗಿ ಬಾನಂಗಳದಲ್ಲಿ ಹಾರುವ ಗಾಳಿಪಟ2

ಚಿತ್ರ: ಗಾಳಿಪಟ2

ನಿರ್ದೇಶನ: ಯೋಗರಾಜ್ ಭಟ್
ನಿರ್ಮಾಣ : ಸೂರಜ್ ಪ್ರೊಡಕ್ಷನ್ಸ್
ನಿರ್ಮಾಪಕರು : ಉಮಾ ಎಂ. ರಮೇಶ್ ರೆಡ್ಡಿ
ತಾರಾಗಣ: ಗಣೇಶ್, ದಿಗಂತ್, ಪವನ್, ಅನಂತನಾಗ್ ಇತರರು.
ರೇಟಿಂಗ್: 4/5

ಗಾಳಿಪಟ 2 ಮೂಲಕ ಯೋಗರಾಜ್ ಭಟ್ ಅವರು ಕುಟುಂಬಸಮೇತ ಆರಾಮವಾಗಿ ಕುಳಿತು ನೋಡಿ ಎಂಜಾಯ್ ಮಾಡಬಹುದಾದ ಚಿತ್ರವನ್ನು ‘ಗಾಳಿಪಟ2’ ಮೂಲಕ ನೀಡುವಲ್ಲಿ ಸಫಲ ಆಗಿದ್ದಾರೆ. ಈ ಮೂಲಕ ಯೋಗರಾಜ್ ಭಟ್ ಗಾಳಿಪಟವನ್ನು ಯಶಸ್ವಿಯಾಗಿ ಹಾರಿಸಿದ್ದಾರೆ.

ಗಣೇಶ್, ದಿಗಂತ್, ಪವನ್ ಕುಮಾರ್ ಪಾತ್ರಗಳು ಇಂದಿನ ಯುವ ಸಮೂಹದ ಕೈಗನ್ನಡಿ ಆಗಿ ಮೂಡಿ ಬಂದಿವೆ. ಅನಂತ್ ನಾಗ್ ನೋವಿನಲ್ಲಿರುವ ಆದರ್ಶ ವ್ಯಕ್ತಿತ್ವದ ಜೀವಸೆಲೆ ಆಗಿ ಕಂಡು ಬರುತ್ತಾರೆ. ಕಳೆದು ಹೋಗಿರುವ ಮಗನ ಹುಡುಕಾಟದಲ್ಲಿ ಯಶಸ್ಸು ಕಾಣುವ ವ್ಯಕ್ತಿ ಆಗಿ ಅನಂತ ನಾಗ್ ಕಾಣಿಸಿದ್ದಾರೆ. ಆ ಯಶಸ್ಸಿನ ಹಿಂದೆ ಗಣೇಶ್ ಪಾತ್ರ ಮೂಡಿ ಬಂದಿದೆ.

ಇಡೀ ಚಿತ್ರವನ್ನು ಆವರಿಸುವಂತೆ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ್ದಾರೆ. ಅವರ ಉತ್ಸಾಹ , ನೋಟ, ಅಸಹಾಯಕತೆ ಎಲ್ಲವೂ ಅದ್ಭುತ ಆಗಿ ಮೂಡಿ ಬಂದಿದೆ.

ವೈಭವೀ ಶ್ಯಾಂಡಿಲ್ಯ, ಸಂಯುಕ್ತ ಮೆನನ್, ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶರ್ಮಿಳಾ ಮಾಂಡ್ರೆ ಮೋಹಕ ನಟನೆ ಮೂಲಕ ಗಮನ ಸೆಳೆಯುತ್ತಾರೆ.
ಕನ್ನಡ ಮೇಷ್ಟ್ರು ಪಾತ್ರದಲ್ಲಿ ಅನಂತ್ ನಾಗ್, ರಂಗಾಯಣ ರಘು, ಸುಧಾ ಬೆಳವಾಡಿ, ಪದ್ಮಜಾರಾವ್ ಮೊದಲಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಯೋಗರಾಜ್ ಭಟ್ ಅವರ ಕಲ್ಪನೆಗೆ ಪೂರಕವಾಗಿ ಸಂತೋಷ್ ಕುಮಾರ್ ಪಾತಾಜೆ ಕ್ಯಾಮೆರಾ ಕಣ್ಣು ಕೆಲಸ ಮಾಡಿದೆ. ಮನಸ್ಸನ್ನು ಉಲ್ಲಾಸಗೊಳಿಸುವ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಕಜಬೇಕಿಸ್ತಾನ್ ಐಸ್ ಗಡ್ಡೆಯ ವಿಹಂಗಮ ನೋಟ ಇದಕ್ಕೆ ಉದಾಹರಣೆ ಆಗಿದೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕೆ ಪ್ಲಸ್ ಎನಿಸಿದೆ.

ಯೋಗರಾಜ್ ಭಟ್ ಅವರ ವಿಶಾಲ ನೆಲೆಯ ತ್ಯಾಗದ ಗುಟ್ಟುಗಳು ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ವ್ಯಕ್ತವಾಗುತ್ತವೆ. ವಿನೋದಗಳಿಂದ ನಕ್ಕು ನಗಿಸುವ ಪಾತ್ರಗಳನ್ನು ಸೃಷ್ಟಿಸುವುದರಲ್ಲಿ ಅವರು ಗೆದ್ದಿದ್ದಾರೆ.
________

Be the first to comment

Leave a Reply

Your email address will not be published. Required fields are marked *

Translate »
error: Content is protected !!