ಪುಷ್ಪಾ 2ರಲ್ಲಿ ಸಾಯಿ ಪಲ್ಲವಿ ಆಕ್ಟಿಂಗ್?

ಸಾಯಿ ಪಲ್ಲವಿ ಪುಷ್ಪ2 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ.

‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್ ರಕ್ತಚಂದನ ಸ್ಮಗ್ಲರ್ ‘ಪುಷ್ಪ’ರಾಜ್ ಪಾತ್ರದಲ್ಲಿ ನಟಿಸಿದ್ದರು. ಮುಂದಿನ ಸೀಕ್ವೆಲ್‌ನಲ್ಲೂ ಅದು ಮುಂದುವರೆಯಲಿದೆ. ಪುಷ್ಪರಾಜ್ ಗೆ ಸಹಾಯ ಮಾಡುವ ಗಿರಿಜನ ಹುಡುಗಿಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದೆ. ಈ ಪಾತ್ರ ರೌಡಿ ಬೇಬಿಗೆ ಹೇಳಿ ಮಾಡಿಸಿದಂತಿದೆ ಎಂದು ಅಭಿಮಾನಿಗಳು ಅಭಿಪ್ರಾಯ ಪತ್ತಿದ್ದಾರೆ. ಡಿ ಗ್ಲಾಮರಸ್‌ ರೋಲ್ ಅದರಲ್ಲೂ ನಟನೆಯ ಅವಕಾಶ ಇರುವ ಪಾತ್ರದಲ್ಲಿ ನಟಿಸಲು ಸಾಯಿ ಪಲ್ಲವಿ ಮುಂದು ಎನ್ನುವ ಮಾತಿದೆ.

ಸಾಯಿ ಪಲ್ಲವಿ ನಟನೆಯ ‘ವಿರಾಟ ಪರ್ವಂ’, ‘ಗಾರ್ಗಿ’ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋಲುಂಡಿವೆ. ರೌಡಿ ಬೇಡಿ ಕಮರ್ಷಿಯಲ್ ಸಿನಿಮಾಗಳನ್ನು ಬಿಟ್ಟು ಪ್ರಯೋಗ ಮಾಡುತ್ತಿರುವುದೇ ಇದಕ್ಕೆ ಕಾರಣ ಅನ್ನುವ ಮಾತುಗಳು ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. ‘ಪುಷ್ಪ’- 2 ಚಿತ್ರದಲ್ಲಿ ನಟಿಸಿದರೆ ಪಲ್ಲವಿ ಅದೃಷ್ಟ ಖುಲಾಯಿಸಲಿದೆ ಎಂದು ಹೇಳಲಾಗಿದೆ.

‘ಪುಷ್ಪ’ ಸಿನಿಮಾ 350 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಹೊಸ ಚಿತ್ರಕ್ಕೆ ಬಜೆಟ್‌ಗೆ ತಕ್ಕಂತೆ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಸಂಭಾವನೆಗಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಮೊದಲ ಭಾಗದಲ್ಲಿ ಸಮಂತಾ ಕುಣಿದಿದ್ದ ‘ಹೂಂ ಅಂಟಾವಾ ಮಾವ’ ಸಾಂಗ್ ಸೂಪರ್ ಹಿಟ್ ಆಗಿತ್ತು. ಎರಡನೇ ಭಾಗದಲ್ಲಿ ಐಟಂ ಸಾಂಗ್‌ಗಾಗಿ ಬಾಲಿವುಡ್‌ ಟಾಪ್ ಹೀರೊಯಿನ್‌ ಕರೆದುಕೊಂಡು ಬರುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.

‘ಪುಷ್ಪ’- 2 ಚಿತ್ರದಲ್ಲೂ ಅಲ್ಲು ಅರ್ಜುನ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ಮುಂದುವರೆಯಲಿದ್ದಾರೆ ಎಂದು ಹೇಳಲಾಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!