ಬಿಡುಗಡೆಗೆ ಸಿದ್ಧವಾಗುತ್ತಿದೆ 1975

ವಸಿಷ್ಠ ಬಂಟನೂರು ನೇತೃತ್ವದಲ್ಲಿ ತಯಾರಾಗಿರುವ 1975 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಕ್ರೈಮ್ ಥ್ರಿಲ್ಲರ್ ಕಂಥಾಹಂದರವಿರುವ ಈ ಸಿನಿಮಾದಲ್ಲಿ ಚಕ್ರವರ್ತಿ ಚಂದ್ರಚೂಡ್, ಜಯ್ ಶೆಟ್ಟಿ, ಮಾನಸ, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ನಟರು ಕಾಣಿಸಿಕೊಂಡಿದ್ದಾರೆ.

1975 ಸಿನಿಮಾದ ಶುರುವಾಗಿದೆ ಎಂಬ ಹಾಡು ಬಿಡುಗಡೆ ಆಗಿದೆ. ಶಿವಪ್ರಸಾದ್ ಸಾಹಿತ್ಯವಿರುವ ಶುರುವಾಗಿದೆ ಲವ್ ಟ್ರ್ಯಾಕ್ ಗೆ ಪವನ್ ಆರ್ ಕೊಟೈನ್ ಧ್ವನಿಯಾಗಿದ್ದಾರೆ.

” 1975 ಇದು ನನ್ನ ಎರಡನೇ ಕನಸು. ಇದೊಂದು ಥ್ರಿಲ್ಲರ್ ಬೇಸ್ ಸಿನಿಮಾ. ಎರಡು ಗಂಟೆ ನಿಮಗೆ ಹೇಗೆ ಹೋಗುತ್ತದೆ ಅನ್ನೋದು ಗೊತ್ತೇ ಆಗುವುದಿಲ್ಲ ಎಂದು ನಿರ್ದೇಶಕ ವಸಿಷ್ಠ ಬಂಟನೂರು ತಿಳಿಸಿದ್ದಾರೆ.

” ಇದು ಕ್ರೈಂ ಥ್ರಿಲ್ಲರ್ ಜಾನರ್ ಸಿನಿಮಾವಾಗಿದೆ. ನಿರ್ಮಾಪಕರು ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲೀಗ ತೂಕದ ಸಿನಿಮಾಗಳು ಬರ್ತಿವೆ. ನಿರ್ದೇಶಕರು ಕನಸು ಕಟ್ಟಿಕೊಂಡು ಸಿನಿಮಾ ಮಾಡಿದ್ದಾರೆ. ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ.

ಪ್ರೊಡಕ್ಷನ್ ಸಿಲ್ವರ್ ಸ್ಕ್ರೀನ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ದಿನೇಶ್ ರಾಜನ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಬೆಂಗಳೂರು, ಉಡುಪಿ ಸೇರಿದಂತೆ ಹಲವು ಕಡೆ ಚಿತ್ರೀಕರಣ ನಡೆದಿದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!