Swecha : ‘ಸ್ವೇಚ್ಛಾ’ ಚಿತ್ರತಂಡದಿಂದ ತಾರಾ ಬಳಗ ರಿವೀಲ್

2022ರಲ್ಲಿ ಬಿಡುಗಡೆ ಆಗಲಿರುವ ಸ್ವೇಚ್ಛ ಚಿತ್ರತಂಡದಿಂದ ತಂತ್ರಜ್ಞರು ಹಾಗೂ ತಾರಾ ಬಳಗದ ಮಾಹಿತಿ ಹೊರ ಬಿದ್ದಿದೆ.

ಸ್ವೇಚ್ಛ ಎಂದರೆ ಸ್ವಾತಂತ್ರ್ಯ ಎಂದು ಅರ್ಥ. ಈ ಚಿತ್ರವನ್ನು ಸ್ಟಾರ್ ಮಸ್ತ್ ವಿಕ್ಟರಿ ಆರ್ಟ್ಸ್ ಬ್ಯಾನರ್ ನಿರ್ಮಿಸುತ್ತಿದೆ. ಈ ಚಿತ್ರದ ಮೂಲಕ ಸಂಬಂಧಗಳು, ಸುಂದರವಾದ ಪ್ರೀತಿಯ ಕಥೆ, ತಾಯಿ ಮತ್ತು ಮಗುವಿನ ಸೆಂಟಿಮೆಂಟ್ ಹೇಳಲು ಯತ್ನಿಸಲಾಗುತ್ತಿದೆ.

ಚಿತ್ರದಲ್ಲಿ 5 ಭಾವನಾತ್ಮಕ ಹಾಡುಗಳಿವೆ. ಇದನ್ನು ರಾಜೇಶ್ ಕೃಷ್ಣನ್, ಅನುರಾಧ ಭಟ್ ಹಾಗೂ ಇತರರು ಹಾಡಿದ್ದಾರೆ. ಗೌಸ್ ಪೀರ್, ಲೋಕಿ ತವಸ್ಯ ಹಾಡುಗಳನ್ನು ಬರೆದಿದ್ದಾರೆ. ಚಿತ್ರದಲ್ಲಿ ಕ್ಲೈಮ್ಯಾಕ್ಸ್ ಫೈಟ್ ಪ್ರೇಕ್ಷಕರನ್ನು ಮನ ಮುಟ್ಟಲಿದೆ ಎಂದು ಚಿತ್ರತಂಡ ತಿಳಿಸಿದೆ.

ಚಿತ್ರದ ನಾಯಕ ನಟ ಆಗಿ ಅನ್ವೀಶ್ ನಟಿಸಲಿದ್ದಾರೆ. ಇವರು ಸಂಯುಕ್ತ2 ಹಾಗೂ ಜಲಿಕಟ್ಟು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ನಾಯಕಿ ಪವಿತ್ರ ನಾಯಕ್ ಅವರು ಲಡ್ಡು, ಎಲ್ಲಿ ನನ್ನ ವಿಳಾಸ ಚಿತ್ರದಲ್ಲಿ ನಟಿಸಿದ್ದಾರೆ. ಇವರು ಪಾರು ಧಾರವಾಹಿಯ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದಾರೆ. ಪ್ರಮುಖ ಆಕರ್ಷಣೆಯಾಗಿ ಸ್ವೇಚ್ಛ ಪಾತ್ರವನ್ನು ಬೇಬಿ ಶ್ರೀ ನಿರ್ವಹಿಸಲಿದ್ದಾರೆ. ಹಲವು ಚಿತ್ರಗಳಲ್ಲಿ ನಟಿಸಿರುವ ಸ್ಪಂದನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತು ಮೊದಲ ಬಾರಿಗೆ ಕೆ ಆರ್ ಮುರಹರಿ ರೆಡ್ಡಿ ಅವರು ಖಳನಾಯಕ ನ ಪಾತ್ರ ಮಾಡಿದ್ದು ಅವರೇ ಸಹ ನಿರ್ಮಾಪಕರು ಕೂಡಾ ಆಗಿದ್ದಾರೆ.

ಈ ಚಿತ್ರಕ್ಕೆ ಕಥೆ ಸುರೇಶ್ ರೆಡ್ಡಿ ಅವರದಾಗಿದ್ದು ಚಿತ್ರವನ್ನು ಸುರೇಶ್ ರಾಜು ಡೈರೆಕ್ಟ್ ಮಾಡುತ್ತಿದ್ದಾರೆ. ಯಶ್ ಯಲ್ಲಲಿಂಗ ಸಹ ನಿರ್ದೇಶಕ ಆಗಿದ್ದಾರೆ. ಸತೀಶ್ ಸಿ ಎಸ್ ಡಿ ಓ ಪಿ, ಲೋಕಿ ತವಸ್ಯ ಸಂಗೀತ ನಿರ್ದೇಶನ, ಸ್ಟಾರ್ ಮಸ್ತಾನ್ ನಿರ್ಮಾಣ, ಮುರ ಹರಿ ರೆಡ್ಡಿ ಸಹ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದ ಬೊಗಸೆ ಮೊಗದ ಚೆಲುವೆ ಹಾಡನ್ನು ಚೇತನ್ ನಾಯಕ್ ಹಾಡಿದ್ದಾರೆ. ಅಮ್ಮ ಹಾಡನ್ನು ಸಿಂಚನ ಹಾಗೂ ಅನುರಾಧ ಭಟ್ ಹಾಡಿದ್ದಾರೆ. ಪ್ರೀತಿ ತನಂತಾನೆ ರಾಜೇಶ್ ಕೃಷ್ಣನ್ ಹಾಗೂ ಅನುರಾಧ ಭಟ್ ಹಾಡಿದ್ದಾರೆ. ಪ್ರೀತಿ ಚಳಕ ಪ್ರೀತಿ ಪುಳಕ ಹಾಗೂ ಸ್ವೇಚ್ಛ ಟೈಟಲ್ ಟ್ರ್ಯಾಕ್ ಹಾಡನ್ನು ಅನುರಾಮ್ ಹಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!