ರಾಜಕೀಯಕ್ಕೆ ಟೆನ್ನಿಸ್ ಕೃಷ್ಣ ಎಂಟ್ರಿ

ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ.

ಅವರು ಇಂದು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಲಿದ್ದಾರೆ. ಈ ವೇಳೆ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಇನ್ನಿತರ ಹಿರಿಯ ಮುಖಂಡರು ಉಪಸ್ಥಿತರಿರುತ್ತಾರೆ ಎನ್ನಲಾಗಿದೆ.

2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಜರುಗಲಿದೆ. ಹೀಗಾಗಿ ಈಗಾಗಲೇ ಎಲ್ಲಾ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಇದರ ಭಾಗವಾಗಿ ಆಮ್ ಆದ್ಮಿ ಪಕ್ಷ ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದು ಸ್ಟಾರ್ ನಟರುಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಈಗಾಗಲೇ ಪಂಜಾಬ್ ಚುನಾವಣೆಯಲ್ಲಿ ಆಪ್ ಗೆದ್ದು ಸರ್ಕಾರ ರಚಿಸಿದ್ದು, ಮುಂಬರುವ ಕರ್ನಾಟಕದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ. ಈಗ ಟೆ ನ್ನಿಸ್ ಕೃಷ್ಣ ಅವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಪಕ್ಷಕ್ಕೆ ಬಲ ತಂದಂತಾಗಿದೆ.

90ರ ದಶಕದಲ್ಲಿ ಟೆನ್ನಿಸ್ ಕೃಷ್ಣ ಜನಪ್ರಿಯ ಆಗಿದ್ದರು. ದೊಡ್ಡಣ್ಣ ಸೇರಿದಂತೆ ಸಾಕಷ್ಟು ಸ್ಟಾರ್ ಹಾಸ್ಯನಟರ ಜೊತೆ ಅವರು ನಟಿಸಿದ್ದಾರೆ. ಈಗ ಅವರ ರಾಜಕೀಯ ಪ್ರವೇಶ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಅವರು ಚಿತ್ರರಂಗದಂತೆ ರಾಜಕೀಯದಲ್ಲಿಯೂ ಅವರು ಯಶಸ್ಸನ್ನು ಪಡೆಯುತ್ತಾರೆಯೇ ಎಂದು ಕಾದು ನೋಡಬೇಕಿದೆ.

ಟೆನ್ನಿಸ್ ಕೃಷ್ಣ ಅವರು ಚಿತ್ರರಂಗಕ್ಕೆ ಬರುವ ಮುನ್ನ ಟೆನ್ನಿಸ್ ಕೋಚ್ ಆಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರ ಹೆಸರಿನ ಜೊತೆ ಟೆನ್ನಿಸ್ ಸೇರ್ಪಡೆಯಾಯಿತು. ಅವರು ಚಿತ್ರರಂಗದಲ್ಲಿ ಟೆನ್ನಿಸ್ ಕೃಷ್ಣ ಎಂದೇ ಪ್ರಸಿದ್ಧರಾಗಿದ್ದಾರೆ.
——

 

Be the first to comment

Leave a Reply

Your email address will not be published. Required fields are marked *

Translate »
error: Content is protected !!