ಕಾಲೇಜು, ಯುವಮನಸ್ಸುಗಳ ಕಥೆ ಹೊಂದಿದ ‘ವಾಸಂತಿ ನಲಿದಾಗ’ ಚಿತ್ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.
ಕಾಲೇಜ್ ಯೂತ್ ಲವ್ ಸ್ಟೋರಿ ಸಬ್ಜೆಕ್ಟ್ ಸಿನಿಮಾ ಇದಾಗಿದೆ. ಈ ಚಿತ್ರದ ವೀಡಿಯೋ ಸಾಂಗ್ ಬಿಡುಗಡೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಚಿತ್ರತಂಡ ಬಹು ನಿರೀಕ್ಷಿತ ಹಾಡಾದ ‘ಕೇಳ್ರಪ್ಪೋ ಕೇಳಿ’ ಹಾಡನ್ನು ಬಿಡುಗಡೆ ಮಾಡಿ ಗಮನ ಸೆಳೆದಿದೆ. ಹಾಡಿಗೆ ಗೌಸ್ ಫೀರ್ ಸಾಹಿತ್ಯವಿದೆ.
ಚಿತ್ರೀಕರಣ ಮುಗಿಸಿರುವ ಚಿತ್ರ ತಂಡಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಜೊತೆಗೆ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯದಲ್ಲೂ ಬ್ಯುಸಿಯಾಗಿದೆ.
ಚಿತ್ರಕ್ಕೆ ಶ್ರೀ ಗುರು ಸಂಗೀತ ನಿರ್ದೇಶನವಿದೆ. ಸ್ಟಾರ್ ಸಿಂಗರ್ ಶಶಾಂಕ್ ಶೇಷಗಿರಿ, ಪ್ರಿಯಾಂಕ ಶ್ರೀಗುರು, ಶ್ರೀಗುರು ಹಾಡಿಗೆ ದನಿಯಾಗಿದ್ದಾರೆ.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ರೋಹಿತ್ ಶ್ರೀಧರ್, ಭಾವನ ಶ್ರೀನಿವಾಸ್, ಜೀವಿತಾ ವಸಿಷ್ಠ ನಟಿಸಿದ್ದಾರೆ. ಜೇನುಗೂಡು ಬ್ಯಾನರ್ ಅಡಿ ಸಿನಿಮಾ ನಿರ್ಮಾಣವಾಗಿದೆ. ಜೇನುಗೂಡು ಕೆ.ಎನ್ ಶ್ರೀಧರ್ ಬಂಡವಾಳ ಹೂಡಿದ್ದಾರೆ. ರವೀಂದ್ರ ವಂಶಿ ಆಯಕ್ಷನ್ ಕಟ್ ಹೇಳಿದ್ದಾರೆ. ರವೀಂದ್ರ ವಂಶಿ ಈ ಹಿಂದೆ ಪುಟಾಣಿ ಸಫಾರಿ, ವರ್ಣಮಯ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.
ಚಿತ್ರತಂಡ ರೋಮ್ಯಾಂಟಿಕ್ ಕಥಾಹಂದರ, ಕಾಲೇಜ್ ಯೂತ್ ಲವ್ ಸ್ಟೋರಿ ಒಳಗೊಂಡ ಸಬ್ಜೆಕ್ಟ್ ಹೊತ್ತು ಹೊಸ ಪ್ರತಿಭೆಗಳೊಂದಿಗೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಸಿನಿಮಾ ತೆರೆ ಕಾಣಲಿದೆ ಎಂದು ಹೇಳಲಾಗಿದೆ.
___

Be the first to comment