Lankasura Movie : ಲಂಕಾಸುರ ಸಿನಿಮಾದ ಟೈಟಲ್​ ಟ್ರ್ಯಾಕ್​ ರಿಲೀಸ್​

ವಿನೋದ್ ಪ್ರಭಾಕರ್ (Vinod Prabhakar) ಯಾವಾಗಲೂ ವಿಭಿನ್ನ ಕತೆಯೊಂದಿಗೆ ಜನರ ಮುಂದೆ ಬರಲು ಇಷ್ಟಪಡುತ್ತಾರೆ. ಮೊದಲಿನಿಂದಲೂ ಸ್ವಲ್ಪ ಖಡಕ್ ಲುಕ್ ಹಾಗೂ ಪಾತ್ರಗಳನ್ನು ಮಾಡುತ್ತಿರುವ ವಿನೋದ್ ಪ್ರಭಾಕರ್​, ಈ ಭಾರೀ ಕೂಡ ಹೊಸತನದೊಂದಿಗೆ ಮರಳಿ ಬಂದಿದ್ದಾರೆ. ಹೌದು, ಸದ್ಯದಲ್ಲಿಯೇ ಅವರ ಬಹು ನಿರೀಕ್ಷಿತ ಚಿತ್ರ ಲಂಕಾಸುರದ (Lankasura) ಟೈಟಲ್​ ಟ್ರ್ಯಾಕ್​  (Title Track) ರಿಲೀಸ್​ ಆಗಿದ್ದು, ಎಲ್ಲೆಡೆ ಟ್ರೆಂಡಿಂಗ್​ ಆಗಿದೆ.

ಲಾಂಗ್ ಹಿಡ್ದು ನಡ್ಕೊಂಡು ಬಂದ್ರೆ ಲಂಕಾಸುರ, ಲಂಕಾಸುರ, ಲಂಕಾಸುರ ಎಂದು ಆರಂಭವಾಗುವ ಈ ಹಾಡಿಗೆ  ಧ್ವನಿ ನೀಡಿರುವ ವಿಜೇತ ಕೃಷ್ಣ ಸಂಗೀತ ಸಂಯೋಜನೆಯನ್ನು ಸಹ ಮಾಡಿದ್ದು, ಮೋಹನ್ ಕುಮಾರ್ ನೃತ್ಯ ನಿರ್ದೇಶನದಲ್ಲಿ ಈ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಲಂಕಾಸುರ ಚಿತ್ರ ವಿನೋದ್ ಪ್ರಭಾಕರ್ ಅವರಿಗೆ ಬಹಳ ವಿಶೇಷವಾಗಿದ್ದು, ಈ ಚಿತ್ರವನ್ನು ಅವರೇ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಹೌದು, ಈ ಬಾರಿ ನಿರ್ಮಾಣಕ್ಕೆ ಇಳಿದಿರುವ ವಿನೋದ್ ಪ್ರಭಾಕರ್ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.  ಇನ್ನು ಲಂಕಾಸುರ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಈಗಾಗಲೇ ಗೋವಾ ಹಾಗೂ ಬೆಂಗಳೂರಿನಲ್ಲಿ ಸರಿ ಸುಮಾರು 65 ದಿನಗಳ ಕಾಲ ಶೂಟಿಂಗ್ ಮಾಡಿ ಬಂದಿದ್ದು, ಟೈಟಲ್​ ಟ್ರ್ಯಾಕ್​ ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.

ಈಗಾಗಲೇ ಈ ಸಿನಿಮಾದ ಟೀಸರ್​ ಸಹ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಾಗೆಯೇ ಈ ಚಿತ್ರದಲ್ಲಿ ಮೊದಲ ಬಾರಿ ಲೂಸ್​ ಮಾದ ಯೋಗಿ ಹಾಗೂ ವಿನೋದ್ ಪ್ರಭಾಕರ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ಚಿತ್ರದ ನಾಯಕಿಯಾಗಿ ಪಾರ್ವತಿ ಅರುಣ್​ ನಟಿಸಿದ್ದಾರೆ. ಇನ್ನು ಹಿರಿಯ ನಟರಾದ ದೇವರಾಜ್, ರವಿಶಂಕರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗುತ್ತಲೇ ಇದೆ.

ಚಿತ್ರತಂಡ ಹೇಳುವ ಪ್ರಕಾರ ಈ ಚಿತ್ರದಲ್ಲಿ ಆಕ್ಷನ್ ಸೀನ್​ಗಳು ಅದ್ಭುತವಾಗಿ ಮೂಡಿಬಂದಿದೆ. ಅದನ್ನು ನೋಡುವವರ ಮೈ ಜುಮ್ಮೆನಿಸುವುದು ಪಕ್ಕಾ. ಹಾಗೆಯೇ ಮೂಲಗಳ ಪ್ರಕಾರ ಈ ಚಿತ್ರದಲ್ಲಿ 5 ಆಕ್ಷನ್​ ಸೀನ್​ಗಳಿದ್ದು, ಡಿಫರೆಂಟ್ ಡ್ಯಾನಿ, ವಿನೋದ್, ಚೇತನ್ ಡಿಸೋಜ, ಅರ್ಜುನ್ ರಾಜ್ , ಕುಂಗ್ಫು ಚಂದ್ರು ಸಾಹಸ ದೃಶ್ಯಗಳ ನಿರ್ದೇಶನ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!