ಸಿರಿಕನ್ನಡ (Siri Kannada) ವಾಹಿನಿ ಕನ್ನಡಿಗರ ಮನದಲ್ಲಿ ತನ್ನದೇ ಸ್ಥಾನ ಉಳಿಸಿಕೊಂಡಿರುವ ಮನರಂಜನಾ (Entertainment) ವಾಹಿನಿ (Channel). ತನ್ನ ವಿಶಿಷ್ಟ, ವಿಭಿನ್ನ ಕಾರ್ಯಕ್ರಮಗಳಿಂದ ದಿನೇ, ದಿನೇ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವ ಕನ್ನಡಿಗರ ಚಾನೆಲ್. ಸಿರಿಕನ್ನಡ ವಾಜಿನಿ ಜನರಿಗೆ ಇಷ್ಟವಾಗುವಂತಹ ಕಾರ್ಯಕ್ರಮಗಳನ್ನು ನೀಡುತ್ತಾ, ಅಭಿಮಾನಿಗಳನ್ನು ತನ್ನತ್ತಾ ಸೆಳೆಯುತ್ತಿದೆ. ಈಗಾಗಲೇ ಎಷ್ಟೊಂದು ಜನಪ್ರಿಯ ಧಾರವಾಹಿ (Serials)ಗಳ ಮೂಲಕ ಜನರನ್ನು ಹಿಡಿದಿಟ್ಟುಕೊಂಡಿದೆ. ಈಗ ಸಿರಿಕನ್ನಡ ಚಾನೆಲ್ ಮತ್ತೊಂದು ಮಹತ್ವದ ಹೆಜ್ಜೆಯನ್ನಿಡುತ್ತಿದೆ. ಅಚ್ಚ ಕನ್ನಡಿಗರ ಸಿರಿಕನ್ನಡ ವಾಹಿನಿಯಲ್ಲಿ ‘ವಿಜಯ ದಶಮಿ’ (Vijaya Dashami), ‘ಅಮ್ಮನ ಮದುವೆ’ (Amman Maduve) ಎಂಬ ಹೊಚ್ಚ ಹೊಸ ಧಾರಾವಾಹಿಗಳು ಆಗಸ್ಟ್ 1 ರಿಂದ ಆರಂಭವಾಗುತ್ತಿವೆ. ಪೂರ್ಣಿಮ ಎಂಟರ್ ಪ್ರೈಸಸ್ ಮೂಲಕ ಮೊದಲ ಧಾರಾವಾಹಿ ನಿರ್ಮಾಣವಾಗುತ್ತಿದೆ.
ಸಿರಿಕನ್ನಡ ವಾಹಿನಿಯಲ್ಲಿ ಆಗಸ್ಟ್ 1ರಿಂದ ವಿಜಯ ದಶಮಿ ದಾರವಾಹಿ ಶುರುವಾಗಲಿದೆ. ಪೂರ್ಣಿಮ ಎಂಟರ್ ಪ್ರೈಸಸ್ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಧಾರವಾಹಿ. ಈ ಧಾರಾವಾಹಿಯನ್ನು ರಾಘವೇಂದ್ರ ರಾಜಕುಮಾರ್ ಹಾಗೂ ಮಂಗಳ ರಾಘವೇಂದ್ರ ರಾಜಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಹತ್ತೊಂಭತ್ತಕ್ಕೂ ಅಧಿಕ ಮುಖ್ಯ ಪಾತ್ರಧಾರಿಗಳಿರುವ ಈ ಧಾರಾವಾಹಿಯಲ್ಲಿ ಎಪ್ಪತ್ತಕ್ಕೂ ಅಧಿಕ ಕಲಾವಿದರು ಅಭಿನಯಿಸುತ್ತಿದ್ದಾರೆ.
ಪೂರ್ಣಿಮ ಎಂಟರ್ ಪ್ರೈಸಸ್ ಮೂಲಕ ‘ವಿಜಯ ದಶಮಿ’ ಧಾರವಾಹಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಮೊಟ್ಟಮೊದಲ ಬಾರಿಗೆ ರಾಘವೇಂದ್ರ ರಾಜಕುಮಾರ್ ಅವರು ಧಾರಾವಾಹಿಯೊಂದನ್ನು ನಿರ್ಮಾಣ ಮಾಡುತ್ತಿರುವುದು ವಿಶೇಷ. ಸಿರಿಕನ್ನಡ ವಾಹಿನಿಯಲ್ಲಿ, ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ವಿಜಯ ದಶಮಿ ಪ್ರಸಾರವಾಗಲಿದೆ.
ವಿಜಯ ದಶಮಿ ಧಾರವಾಹಿಯನ್ನು ನಿರ್ದೇಶಕರು ಶಶಿ. ಇದರ ಚಿತ್ರೀಕರಣ ಭಾರತದಾದ್ಯಂತ ಅದ್ಭುತ ಸ್ಥಳಗಳಲ್ಲಿ ನಡೆಯಲಿದೆ. ಈ ಧಾರಾವಾಹಿಯ ಪ್ರೋಮೊ ನೋಡಿದರೆ, ಕಮರ್ಷಿಯಲ್ ಚಿತ್ರವೊಂದರ ಟ್ರೇಲರ್ ನೋಡಿದ ಅನುಭವವಾಗುತ್ತದೆ. ಅಷ್ಟು ಅದ್ದೂರಿಯಾಗಿ ಮೂಡಿಬಂದಿದೆ ಪ್ರೋಮೊ. ಧಾರಾವಾಹಿ ಕೂಡ ಎಲ್ಲರ ಮೆಚ್ಚುಗೆ ಪಡೆಯಲಿದೆ ಎಂಬ ಭರವಸೆ ತಂಡದ್ದು.
ಆಗಸ್ಟ್ 1ರಿಂದ ರಾತ್ರಿ 8 ಗಂಟೆಗೆ ಅಮ್ಮನ ಮದುವೆ ಧಾರವಾಹಿ ಪ್ರಸಾರವಾಗಲಿದೆ. ನ್ಯೂ ಡಿ2 ಮಿಡಿಯಾ ಈ ಧಾರವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಮದುವೆಯಾಗಿ ಜೀವನರೂಪಿಸಿಕೊಳ್ಳಲು ಹೊರಟ ಮಗಳು, ತಾಯಿಯ ಒಂಟಿತನಕ್ಕೆ ಉತ್ತರವಾಗಿ ಅವಳಿಗೊಂದು ಬದುಕು ಕಟ್ಟಿಕೊಡಲು ನಡೆಸುವ ಹೋರಾಟದ ಭಾವುಕ ಕಥೆ ಇದಾಗಿದೆ.
ಈ ಎರಡು ಧಾರಾವಾಹಿಗಳ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ಸಿರಿಕನ್ನಡದ ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ, ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ ಹಾಗೂ ಅಪಾರ ಸಂಖ್ಯೆಯ ಕಲಾವಿದರು ಉಪಸ್ಥಿತರಿದ್ದರು. ನಿರ್ದೇಶಕರಾದ ಸುನೀಲ್ ಕುಮಾರ್ ದೇಸಾಯಿ, ಚೇತನ್ ಕುಮಾರ್, ಸೇತುರಾಮ್, ಕಿಶೋರ್ ಮುಂತಾದ ಗಣ್ಯರು ಆಗಮಿಸಿ ಶುಭ ಕೋರಿದರು.
ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಅಮ್ಮನ ಮದುವೆ ಧಾರವಾಹಿ ಪ್ರಸಾರ ಆಗಲಿದೆ. ರಾತ್ರಿ 8.30ಕ್ಕೆ ವಿಜಯ ದಶಮಿ ಧಾರವಾಹಿ ಪ್ರಸಾರವಾಗಲಿದೆ.
Be the first to comment