ಹಿರಿಯ ರಾಜಕಾರಣಿ ಜಮೀರ್ ಅಹಮ್ಮದ್ ಖಾನ್ ಪುತ್ರ ಝೈದ್ ಖಾನ್ ನಾಯಕನಾಗಿ ಬಣ್ಣಹಚ್ಚಿರುವ ಪ್ಯಾನ್ ಇಂಡಿಯಾ ಚಿತ್ರ ” ಬನಾರಸ್ ” ಚಿತ್ರೀಕರಣ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ತೆರೆಗೆ ಬರಲು ಸಜ್ಜಾಗಿದೆ.
ಜಯತೀರ್ಥ ಆಕ್ಷನ್ ಕಟ್ ಹೇಳಿರುವ “ಬನಾರಸ್ ” ಚಿತ್ರವನ್ನು ಕಾಶಿಯ 84 ಘಾಟ್ ಗಳಲ್ಲಿ ಚಿತ್ರೀಕರಣ ಮಾಡಿರುವುದು ಚಿತ್ರದ ಹೆಗ್ಗಳಿಕೆ. ತಿಲಕ್ ರಾಜ್ ಬಲ್ಲಾಳ್ ಬಂಡವಾಳ ಹೂಡಿದ್ದು ಸೋನಲ್ ಮಾಂಟೋರಿಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಪುಣ್ಯಕ್ಷೇತ್ರಗಳಲ್ಲಿ ಕಾಶಿಗೆ ವಿಶೇಷ ಸ್ಥಾನ. ಕಾಶಿಯನ್ನು “ಬನಾರಸ್” ಅಂತಲೂ ಕರೆಯುವುದು ವಾಡಿಕೆ. ಪರಮ ಪಾವನೆಯಾದ ಗಂಗೆ “ಬನಾರಸ್” ನಲ್ಲಿ ಹರಿದು ಎಷ್ಟೋ ಜನರ ಪಾಪ ನಿವಾರಣೆ ಆಗಲಿದೆ ಎನ್ನುವ ನಂಬಿಕೆಯೂ ಇದೆ.
ಕನ್ನಡ ಹಾಗೂ ಮಲೆಯಾಳಂ ಭಾಷೆಯಲ್ಲಿ ಮೂಡಿ ಬಂದಿರುವ ” ಮಾಯಾಗಂಗೆ” ಹಾಡನ್ನು ಏಕಕಾಲಕ್ಕೆ ಬಿಡುಗಡೆ ಮಾಡಲಾಯಿತು. ಕನ್ನಡದಲ್ಲಿ ಡಾ.ವಿ.ನಾಗೇಂದ್ರಪ್ರಸಾದ್ , ಮಲೆಯಾಳಂ ನಲ್ಲಿ ಆದಿ ಹಾಡು ಬರೆದಿದ್ದಾರೆ,ಅಜನೀಶ್ ಲೋಕನಾಥ್ ಸಂಗೀತವಿದ್ದು ನಿರ್ಮಾಪಕಿ ನಿರ್ಮಾಪಕಿ ಶೈಲಜಾನಾಗ್ ಹಾಡನ್ನು ಬಿಡುಗಡೆ ಮಾಡಿದರು.
ಅಭಿಷೇಕ್ ಅಂಬರೀಶ್, ವಿನೋದ್ ಪ್ರಭಾಕರ್ ಹಾಗೂ ಯಶಸ್ ಸೂರ್ಯ, ಲಹರಿ ವೇಲು ಸೇರಿದಂತೆ ಹಲವು ಮಂದಿ ಹಾಜರಿದ್ದು ಶುಭ ಹಾರೈಸಿದರು.
ಈ ವೇಳೆ ನಿರ್ದೇಶಕ ಜಯತೀರ್ಥ ಮಾತನಾಡಿ ನಾಗೇಂದ್ರಪ್ರಸಾದ್ ಅವರಿಗೆ ಹಾಡಿನ ಸನ್ನಿವೇಶ ವಿವರಿಸಿದ್ದೆ. ಮಾಮೂಲಿ ತರಹದ ಪ್ರೇಮಗೀತೆಗಿಂತ ಬೇರೆಯದೇ ಗೀತೆ ಬರೆದುಕೊಟ್ಟಿದ್ದಾರೆ. ಕಾಶಿಯಲ್ಲಿ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ಆಲ್ಲಿನ 84 ಘಾಟ್ ಗಳಲ್ಲೂ ನಮ್ಮ ಚಿತ್ರದ ಚಿತ್ರೀಕರಣ ನಡೆದಿದೆ ಎಂದರು.
ನಾಯಕ ಝೈದ್ ಖಾನ್ ನಿರ್ದೇಶನ ಮಾಡಿಕೊಡಿ ಎಂದಾಗ ನಟನೆ ಕಲಿಸಬೇಕಾದರೆ ಸ್ವಲ್ಪ ಕಷ್ಟವಾಗಬಹುದು ಅಂದೆ. ಅದಕ್ಕೆ ಅವರು ಹೇಳಿ ಕೊಟ್ಟಿದ್ದನ್ನು ಮಾಡುತ್ತೇನೆ ಎಂದು ಹೇಳಿ ಅದರಂತೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಯಕ ಝೈದ್ ಖಾನ್. ತಿಲಕ್ ಸರ್ ನನ್ನ ಗಾಡ್ ಫಾದರ್. ಬಾಂಬೆಗೆ ಕರೆದುಕೊಂಡು ಹೋಗಿ, ನಟನಾ ಶಾಲೆಗೆ ಸೇರಿಸಿ, ನಂತರ ಚಿತ್ರ ನಿರ್ಮಾಣ ಮಾಡಿದರು. ಅಲ್ಲದೆ “ಬನಾರಸ್” ಪ್ಯಾನ್ ಇಂಡಿಯಾ ಚಿತ್ರವಾಗಿಸಿ ಎಲ್ಲಾ ಕಡೆ ಬಿಡುಗಡೆ ಮಾಡುತ್ತಿದ್ದಾರೆ. ನಿರ್ದೇಶಕ ಜಯತೀರ್ಥ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಇಡೀ ಚಿತ್ರತಂಡದ ಪರಿಶ್ರಮದಿಂದ “ಬನಾರಸ್” ಚೆನ್ನಾಗಿ ಬಂದಿದೆ. ನನ್ನ ಮೊದಲ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು.
ನಾಯಕಿ ಸೋನಲ್ ಮಾಂಟೋರಿಯೋ, ಚಿತ್ರದ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ನಿರ್ಮಾಪಕ ಮಂಗಳೂರಿನ, ಈಗ ಬಾಂಬೆ ವಾಸಿ. ಚಿತ್ರದ ಕಥೆ ಇಷ್ಟವಾಯಿತು. ಸಿನಿಮಾ ಮಾಡಿದ್ದೇನೆ. ಪ್ರೋತ್ಸಾಹಿಸಿ ಎಂದರು. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಗೀತ ರಚನೆಕಾರ ಡಾ.ವಿ.ನಾಗೇಂದ್ರ ಪ್ರಸಾದ್ ಮಾಹಿತಿ ಹಂಚಿಕೊಂಡರು.
Be the first to comment