Gowli : ಸದ್ದು ಮಾಡುತ್ತಿದೆ ಗೌಳಿ ಪೋಸ್ಟರ್

ಶ್ರೀನಗರ ಕಿಟ್ಟಿ ಗೌಳಿ ಅವತಾರದಲ್ಲಿ ಚಿತ್ರಪ್ರೇಮಿಗಳ ಮುಂದೆ ಬರಲು ಸಜ್ಜಾಗಿದ್ದು, ಹೊಸ ಪೋಸ್ಟರ್ ನ ಅವರ ಖಡಕ್ ಲುಕ್​ ಗಮನ ಸೆಳೆಯುತ್ತಿದೆ. ಖಡಕ್ ಲುಕ್​ ನಲ್ಲಿ ಕಿಟ್ಟಿ, ಹೊಸ ಭರಸೆಯನ್ನು ಮೂಡಿಸಿದ್ದಾರೆ. ಪಕ್ಕಾ ರಾ ಲುಕ್​ ನಲ್ಲಿರುವ ಕಿಟ್ಟಿ, ಉದ್ದ ಕೂದಲು, ಗಡ್ಡದೊಂದಿಗೆ ಮಿಂಚಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಮತ್ತು ಪೋಸ್ಟರ್ ಗಳು ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ.

ಇನ್ಸ್‌ಪೆಕ್ಟರ್‌ ಕಾಳಿಂಗ ಪಾತ್ರದಲ್ಲಿ ಶರತ್‌ ಲೋಹಿತಾಶ್ವ ಅಭಿನಿಯಿಸುತ್ತಿದ್ದಾರೆ. ಅವರ ಚಿತ್ರದಲ್ಲಿನ ಪಾತ್ರದ ತೂಕವನ್ನು ಟೀಸರ್ ಮತ್ತು ಪೋಸ್ಟರ್ ಗಳಲ್ಲಿ ಸಖತ್ ಆಗಿ ತೋರಿಸಲಾಗಿದೆ. ದುರ್ಗಿ ಪಾತ್ರದಲ್ಲಿ ನಟಿಸುತ್ತಿರುವ ರುದ್ರೇಶ್‌ ಲುಕ್ ನೋಡಿದವರ ಮೈ ಜುಮ್​ ಎನ್ನುವಂತಿದೆ.

ರಂಗಾಯಣ ರಘು ಅವರು ಈ ಚಿತ್ರದಲ್ಲಿ ಹಳ್ಳಿಗನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಂಬಳಿ ಹೊದ್ದು, ಬ್ಲ್ಯಾಕ್ ಶೇಡ್​ ನಲ್ಲಿ ಕಾಣಿಸಿಕೊಂಡಿರುವ ಅವರು ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ವಿಲನ್ ಪಾತ್ರದಲ್ಲಿ ಯಶ್‌ ಶೆಟ್ಟಿ ಮತ್ತು ಕಾಲ್ಟಾ ಪಾತ್ರದಲ್ಲಿ ಮಿಂಚುತ್ತಿರುವ ಕಾಕ್ರೋಚ್‌ ಸುಧಿ ಲುಕ್ ಭಯಾನಕವಾಗಿದೆ. ಪೋಸ್ಟರ್ ಮತ್ತು ಟೀಸರ್ ನಿಂದಲೇ ಗೌಳಿ ಚಿತ್ರ ಸಖತ್ ಸದ್ದು ಮಾಡುತ್ತಿದೆ. ಮತ್ತೊಂದು ಇಂಡಸ್ಟ್ರಿ ಹಿಟ್ ಚಿತ್ರ ಇದಾಗಲಿದೆ ಎಂಬ ಮಾತುಗಳು ಸ್ಯಾಂಡಲ್​ವುಡ್ ನಲ್ಲಿ ಕೇಳಿಬರುತ್ತಿದೆ. ಚಿತ್ರಕ್ಕೆ ಸೂರ ನಿರ್ದೇಶನ ಮಾಡಿದ್ದು, ಪಾವನಾ ಅವರು ಕಿಟ್ಟಿಗೆ ಜೋಡಿಯಾಗಿ ನಟಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!