ಸುನಿಲ್ಕುಮಾರ್ದೇಸಾಯಿ ನಿರ್ದೇಶನ, ಡಾ.ವಿಷ್ಣುವರ್ಧನ್ ಅಭಿನಯದ ‘ನಿಷ್ಕರ್ಷ’ ಚಿತ್ರವು ಹಿಟ್ ಆಗಿತ್ತು. ಕಟ್ ಮಾಡಿದರೆ ಎರಡೂವರೆ ದಶಕದ ನಂತರ ಇದೇ ಹೆಸರಿನಲ್ಲಿ ಸಿನಿಮಾವೊಂದು ಬರುತ್ತಿದೆ. ಎರಡು ರೀತಿಯ ಚಿತ್ರಕತೆ ಇರಲಿದ್ದು, ಕ್ಲೈಮಾಕ್ಸ್ ಬೇರೆ ರೀತಿಯಲ್ಲಿ ಇರುವುದು ವಿಶೇಷ. 2016ರಲ್ಲಿ ಬೆಂಗಳೂರುದಲ್ಲಿ ನಡೆದ ಘಟನೆಗೆ ಚಿತ್ರರೂಪ ಕೂಡುತ್ತಿರುವುದು ಎರಡನೆ ಬಾರಿ ನಿರ್ದೇಶಕರಾಗುತ್ತಿರುವ ಸಿ.ಎಂ.ವಿಜಯ್. ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ನೋಡಿದರೆ, ಇದೇ ಆಗುವುದೆಂದು ಪ್ರೇಕ್ಷಕ ಸಿನಿಮಾ ನೋಡಿ ಹೊರಬರುವಾಗ ಅನಿಸುತ್ತದಂತೆ. ಮೈಸೂರು, ರಾಜಸ್ತಾನ ಹಾಗೂ ಹಾಡುಗಳಿಗೆ ವಿದೇಶಕ್ಕೆ ಹೋಗುವ ಇರಾದೆ ಇದೆ. ಮಾರ್ಷಲ್ ಆಟ್ರ್ಸ್ ತರಭೇತಿ, ರಂಗಭೂಮಿಯಲ್ಲಿ ತಾಲೀಮು ಪಡೆದುಕೊಂಡಿರುವ ಅನಿಕೇತನ್ ನಾಯಕನಾಗಿ ಮೊದಲ ಅನುಭವ. ದಿವ್ಯಾಉರಡುಗ ನಾಯಕಿ, ಉಳಿದಂತೆ ಅನಂತ್ನಾಗ್, ಸುಹಾಸಿನಿ, ಹಾಸ್ಯ ಪಾತ್ರದಲ್ಲಿ ಪ್ರಶಾಂತ್ವರದಮೂಲ ನಟನೆ ಇದೆ. ಅಲ್ಲದೆ ಸೋದರರಾದ ಸಾಯಿಕುಮಾರ್-ರವಿಶಂಕರ್ ಅವರನ್ನು ಒಟ್ಟಿಗೆ ತೋರಿಸುತ್ತಿರುವುದು ಪ್ಲಸ್ಪಾಯಿಂಟ್.
ಎ.ಪಿ.ಅರ್ಜುನ್. ಭರ್ಜರಿಚೇತನ್ ಸಾಹಿತ್ಯದ ಮೂರು ಗೀತೆಗಳಿಗೆ ಸಂಗೀತ ಸಂಯೋಜಿಸಿತ್ತಿರುವುದು ವಿವೇಕ್ಚಕ್ರವರ್ತಿ. ಛಾಯಗ್ರಹಣ ಜಿ.ಎನ್.ಶರವಣನ್, ಸಾಹಸ ವಿನೋಧ್, ಸಂಕಲನ ಕೆ.ಎಂ.ಪ್ರಕಾಶ್ ಅವರದಾಗಿದೆ. ಮಗ ನಾಯಕನಾಗುತ್ತಿರುವ ಚಿತ್ರಕ್ಕೆ ಹಣ ಹೂಡುತ್ತಿರುವುದು ಕೈಗಾರಿಕೋದ್ಯಮಿ ಎನ್.ಸಿ.ಮಹೇಶ್. ಮಹೂರ್ತ ಸಮಾರಂಭಕ್ಕೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣಯ್ಯ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.
Pingback: Franck Muller fakes