ಚಿತ್ರ ವಿಮರ್ಶೆ : ಭಗವಂತ ಕಲಿಸುವ ಪಾಠ “ದಾರಿ ಯಾವುದಯ್ಯಾ ವೈಕುಂಠಕ್ಕೆ”

ಚಿತ್ರ :ದಾರಿ ಯಾವುದಯ್ಯಾ ವೈಕುಂಠಕ್ಕೆ

ನಿರ್ದೇಶಕ : ಸಿದ್ದು ಪೂರ್ಣಚಂದ್ರ
ನಿರ್ಮಾಪಕ : ಶರಣಪ್ಪ ಎಂ. ಕೊಟಗಿ
ತಾರಾಗಣ : ವರ್ಧನ್ ತೀರ್ಥಹಳ್ಳಿ, ಬಲ ರಾಜ್ವಾಡಿ, ತಿಥಿ ಖ್ಯಾತಿಯ ಪೂಜಾ, ಸ್ಪಂದನ ಪ್ರಸಾದ, ಅನುಷಾ, ಶೀಬಾ , ಅರುಣ್‌ ಮೂರ್ತಿ ಮುಂತಾದವರು.
ರೇಟಿಂಗ್: 3.5/ 5

ಪ್ರತಿಯೊಬ್ಬ ಮನುಷ್ಯನಿಗೂ ತಾನು ಅರಿಯಬೇಕಾದ ಪಾಠವನ್ನು ಭಗವಂತ ಕಲಿಸುತ್ತಾನೆ ಎನ್ನುವುದನ್ನು ಸೂಕ್ಷ್ಮವಾಗಿ ಮನಮುಟ್ಟು ಮಾಡುವ ಚಿತ್ರ “ದಾರಿ ಯಾವುದಯ್ಯಾ ವೈಕುಂಠಕ್ಕೆ” ಮೃಗೀಯ ಸ್ವರೂಪದ ವ್ಯಕ್ತಿ ಸುಧಾಕರ ( ವರ್ಧನ್ ತೀರ್ಥಹಳ್ಳಿ) ಕೊಲೆ , ದರೋಡೆ, ವಂಚನೆ, ಕಳ್ಳತನ ಮಾಡುತ್ತಾನೆ. ತಾನು ಪ್ರೀತಿಸಿದ ಹುಡುಗಿ (ಅನುಷ) ಗಾಗಿ ಈ ದಾರಿ ಹಿಡಿಯುತ್ತಾನೆ.
ಮುಂದೆ ಕೊಲೆಗಾರ ನಾಯಕ ಏನಾಗುತ್ತಾನೆ? ಅವನು
ಪ್ರೇಯಸಿ ಆಸೆ ಈಡೇರಿಸುತ್ತಾನಾ? ಈ ಎಲ್ಲದಕ್ಕೂ ಉತ್ತರ ತಿಳಿಯಲು ಚಿತ್ರ ನೋಡಬೇಕು.
ವಿಭಿನ್ನ ಕಥಾಹಂದರವನ್ನು ನೈಜವಾಗಿ ತೆರೆಯಮೇಲೆ ತಂದಿಡುವ ಪ್ರಯತ್ನವನ್ನು ನಿರ್ದೇಶಕ ಸಿದ್ದು ಪೂರ್ಣಚಂದ್ರ ಮಾಡಿದ್ದಾರೆ. ವರ್ಧನ್ ತೀರ್ಥಹಳ್ಳಿ ಭರವಸೆಯ ಕಲಾವಿದನಾಗಿ ಈ ಚಿತ್ರದ ಮೂಲಕ ಹೊರಹೊಮ್ಮಿದ್ದಾರೆ. ತಿಥಿ ಚಿತ್ರದ ನಂತರ ಪ್ರಬುದ್ಧ ಅಭಿನಯವನ್ನು ನಟಿ ಪೂಜಾ ನೀಡಿದ್ದಾರೆ.

ನಾಯಕಿಯ ತಾಯಿಯ ಪಾತ್ರಧಾರಿ ಶೀಬಾ ಗಮನಾರ್ಹವಾಗಿ ನಟಿಸಿದ್ದಾರೆ. ಅರುಣ್ ಮೂರ್ತಿ , ಸ್ಪಂದನ ಪ್ರಸಾದ್ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಇಡೀ ಚಿತ್ರವನ್ನ ಆವರಿಸಿಕೊಂಡಿರುವುದು ಸ್ಮಶಾನ ಕಾಯುವ ಪಾತ್ರ ಮಾಡಿರುವ ಬಲ ರಾಜ್ವಾಡಿ. ನೈಜವಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಸಂಗೀತದ ಮೂಲಕ ಲೋಕಿ ಗಮನ ಸೆಳೆದಿದ್ದಾರೆ.
ಛಾಯಾಗ್ರಹಣದಲ್ಲಿ ನಿತಿನ್ ಅಪ್ಪಿ ಇನ್ನಷ್ಟು ಚಮತ್ಕಾರ ತೋರಬಹುದಿತ್ತು.

ಬಸವೇಶ್ವರ ಕ್ರಿಯೇಷನ್ಸ್ ಬ್ಯಾನರ್‌ ಅಡಿಯಲ್ಲಿ ಶರಣಪ್ಪ ಎಂ. ಕೋಟಗಿ ವಿಭಿನ್ನ ಬಗೆಯ ಕಥೆಯ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಸ್ಕೈ ಲೈನ್ ದಿಲೀಪ್ ಪ್ರಥಮ ಬಾರಿಗೆ ಇನ್ಫ್ಯಾoಟ್ ಸ್ಟುಡಿಯೋ ಥ್ರೂ ಶೆರ್ಲಿನ್ ಪಿಕ್ಚರ್ಸ್ ಮೂಲಕ ಚಿತ್ರವನ್ನು ವಿತರಣೆ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!