‘ಬಾನದಾರಿಯಲ್ಲಿ’ ಸಿನಿಮಾದಲ್ಲಿ ವನ್ಯಜೀವಿ ಛಾಯಾಗ್ರಾಹಕಿ ಕಾದಂಬರಿ ಪಾತ್ರದಲ್ಲಿ ರೀಷ್ಮಾ ನಾಣಯ್ಯ ನಟಿಸಲಿದ್ದಾರೆ.
ಚಿತ್ರ ತಂಡ ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಫಸ್ಟ್ ಲುಕ್ ರಿವೀಲ್ ಮಾಡಿತ್ತು. ಈಗಾಗಲೇ ಸಿನಿಮಾದಲ್ಲಿ ರೋಮ್ಯಾಂಟಿಕ್ ಸಾಹಸ ನಾಟಕದಲ್ಲಿ ಸರ್ಫರ್ ಪಾತ್ರದಲ್ಲಿ ನಟಿಸಿರುವ ರುಕ್ಮಿಣಿ ವಸಂತ್ ಅವರ ಪಾತ್ರದ ವಿವರಗಳನ್ನು ಬಹಿರಂಗ ಮಾಡಲಾಗಿದೆ.
ಪ್ರೀತಾ ಜಯರಾಮನ್ ಅವರ ಕಥೆ ಮತ್ತು ಪ್ರೀತಂ ಗುಬ್ಬಿ ಅವರ ನಿರ್ದೇಶನ, ಚಿತ್ರಕಥೆಯೊಂದಿಗೆ ಮೇ 25 ರಂದು ಚಿತ್ರೀಕರಣ ಪ್ರಾರಂಭವಾಗಲಿದೆ. ಬೆಂಗಳೂರು, ಚೆನ್ನೈ, ವಾರಣಾಸಿ, ಆಫ್ರಿಕಾದಲ್ಲಿ ಚಿತ್ರೀಕರಣ ನಡೆಯಲಿದೆ. ವಿ ಹರಿಕೃಷ್ಣ ಸಂಗೀತ, ಅಭಿಲಾಶ್ ಕಲತಿ ಛಾಯಾಗ್ರಹಣ ಚಿತ್ರಕ್ಕಿದೆ.
ಪ್ರೀತಂ ಗುಬ್ಬಿ ಜೊತೆ ಗಣೇಶ್ ಈ ಸಿನಿಮಾ ಮೂಲಕ ಒಂದಾಗುತ್ತಿದ್ದಾರೆ. ಮುಂಗಾರು ಮಳೆ, ಗಾಳಿಪಟ ಮುಂತಾದ ಹಿಟ್ ಚಿತ್ರಗಳು ಕತೆಗಳನ್ನು ಕೊಟ್ಟ ಪ್ರೀತಂ ಗುಬ್ಬಿ ನಿರ್ದೇಶನದ ಈ ಸಿನಿಮಾ ಮೇಲೆ ಸಾಕಷ್ಟು ಕುತೂಹಲವಿದೆ. ಶ್ರೀ ವಾರೆ ಟಾಕೀಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
ಪ್ರೀತಂ ಗುಬ್ಬಿ ಬರೆದ ಮುಂಗಾರು ಮಳೆ ಚಿತ್ರದ ಕಥೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ವೃತ್ತಿ ಬದುಕಿಗೆ ಮಹತ್ವದ ತಿರುವು ತಂದುಕೊಟ್ಟಿತ್ತು. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಗಾಂಧಿ ನಾಯಕಿಯಾಗಿ ನಟಿಸಿದ್ದರು.
ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗಾಳಿಪಟ 2 ಚಿತ್ರ ಆಗಸ್ಟ್ ತಿಂಗಳಿನಲ್ಲಿ ತೆರೆಗೆ ಬರಲಿದ್ದು, ನಿರೀಕ್ಷೆ ಹುಟ್ಟು ಹಾಕಿದೆ.
___

Be the first to comment