ಮೇ 20ಕ್ಕೆ ಬಘೀರ ಮುಹೂರ್ತ

ಶ್ರೀಮುರುಳಿ ನಟನೆಯ ಬಘೀರ ಸಿನಿಮಾದ ಮುಹೂರ್ತ ಮೇ.20ರಂದು ನಡೆಯಲಿದೆ.

ಹೊಂಬಾಳೆ ಫಿಲ್ಮ್ಸ್ ನ ಬಹುನಿರೀಕ್ಷಿತ ಚಿತ್ರವನ್ನು ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಮುರುಳಿ ಜನಪ್ರಿಯ ಚಿತ್ರ ಉಗ್ರಮ್ ನ ನಿರ್ದೇಶಕ ಪ್ರಶಾಂತ್ ನೀಲ್ ಇದಕ್ಕೆ ಕಥೆ ಬರೆದಿದ್ದಾರೆ.

ಬಘೀರ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಶ್ರೀಮುರುಳಿ ಟಫ್ ರಗಡ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ‘When society becomes a jungle.. ಎಂಬ ಟ್ಯಾಗ್ ಲೈನ್ ಹೊಂದಿದೆ.

“ನನಗೆ ದೊರೆತ ಅತ್ಯುತ್ತಮ ಕಥೆಗಳಲ್ಲಿ ಬಘೀರ ಒಂದಾಗಿದೆ. ಇದು ನನಗೆ ಪಾತ್ರಕ್ಕೆ ತಕ್ಕಂತೆ ತಯಾರಾಗುವುದಕ್ಕೆ ಸಹಾಯ ಮಾಡಿದೆ. ಈ ಚಿತ್ರಕ್ಕಾಗಿ 2 ವರ್ಷಗಳಿಂದ ಚಿತ್ರತಂಡ ಅವಿರತ ಶ್ರಮ ಹಾಕಿದೆ. ಉಗ್ರಮ್ ನಂತರ ನನ್ನ ಈ ಪಾತ್ರವನ್ನು ಜನರು ಇಷ್ಟಪಡುತ್ತಾರೆ ಎಂಬ ವಿಶ್ವಾಸವಿದೆ” ಎಂದು ಶ್ರೀಮುರಳಿ ಹೇಳಿದ್ದಾರೆ.

“ಪ್ರಶಾಂತ್ ನೀಲ್ ಅವರ ಚಿತ್ರಕಥೆ ಸಂಪೂರ್ಣ ಭಿನ್ನವಾಗಿರುತ್ತದೆ. ಅವರಿಗೆ ನನ್ನ ಸಾಮರ್ಥ್ಯ, ನ್ಯೂನತೆಗಳು ತಿಳಿದಿರುತ್ತದೆ. ಅವರು ಅತ್ಯುತ್ತಮವಾದುದ್ದನ್ನೇ ಕೊಡುತ್ತಾರೆ” ಎಂದು ಶ್ರೀಮುರುಳಿ ತಿಳಿಸಿದ್ದಾರೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!