ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ಅಭಿನಯದ ‘ಪ್ರಾರಂಭ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಪ್ರಾರಂಭ ಸಿನಿಮಾ ಮೇ 20ರ ಶುಕ್ರವಾರ ತೆರೆಗೆ ಬರಲಿದೆ.
ಕೆಲ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಮನು ಕಲ್ಯಾಡಿ ಈ ಬಾರಿ ರವಿಚಂದ್ರನ್ ಪುತ್ರನಿಗಾಗಿ ರೊಮ್ಯಾಂಟಿಕ್ ಲವ್ ಸ್ಟೋರಿಯನ್ನು ಹೆಣೆದಿದ್ದಾರೆ. ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಮನು ಕಲ್ಯಾಡಿ ಅವರೇ ಬರೆದಿದ್ದಾರೆ.
ಜೇನುಶ್ರೀ ತನುಷಾ ಪ್ರೊಡಕ್ಷನ್ಸ್ ಅಡಿಯಲ್ಲಿ ತಯಾರಾದ ಪ್ರಾರಂಭ ಸಿನಿಮಾಗೆ ಪ್ರಜ್ವಲ್ ಪೈ ಸಂಗೀತ ಸಂಯೋಜಿಸಿದ್ದಾರೆ. ಸುರೇಶ್ ಬಾಬು ಛಾಯಾಗ್ರಹಣವಿದೆ. ಶಾಂಭವಿ ವೆಂಕಟೇಶ್ ಮತ್ತು ಕಡ್ಡಿಪುಡಿ ಚಂದ್ರು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಯು/ಎ ಸರ್ಟಿಫಿಕೇಟ್ ಪಡೆದಿರುವ ಪ್ರಾರಂಭ ಸಿನಿಮಾ ಲಿಪ್‌ಲಾಕ್ ದೃಶ್ಯಗಳಿಂದ ಸಂಚಲನ ಮೂಡಿಸಿತ್ತು. ಸಾಹೇಬ, ಬೃಹಸ್ಪತಿ ಮತ್ತು ಮುಗಿಲ್‌ಪೇಟೆ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಮನೋರಂಜನ್ ಅವರ ನಾಲ್ಕನೇ ಸಿನಿಮಾ ಇದಾಗಿದೆ. ಚಿತ್ರ ಯಾವ ರೀತಿ ಪ್ರೇಕ್ಷಕರನ್ನು ಮೋಡಿ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಈಗಾಗಲೇ ಚಿತ್ರದ ಹಾಡು, ಟ್ರೈಲರ್ ಬಿಡುಗಡೆ ಆಗಿದ್ದು, ಕುತೂಹಲ ಮೂಡಿಸಿದೆ.
___





Be the first to comment