ಒಟಿಟಿಯಲ್ಲಿ ಕೆಜಿಎಫ್ 2 ರಿಲೀಸ್

ಭಾರತೀಯ ಚಿತ್ರರಂಗದಲ್ಲಿ ಗಳಿಕೆಯಲ್ಲಿ ನೂತನ ದಾಖಲೆ ಬರೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ಆದರೆ ಅಮೇಜಾನ್​ ಪ್ರೈಮ್ ವಿಡಿಯೋ ಚಂದಾದಾರರು ಈ ಸಿನಿಮಾ ನೋಡಬೇಕು ಎಂದರೆ ಹೆಚ್ಚುವರಿಯಾಗಿ ಹಣ ಪಾವತಿಸಬೇಕು. 199 ರೂಪಾಯಿ ಪಾವತಿಸಿ ಚಿತ್ರ ವೀಕ್ಷಣೆ ಮಾಡಬಹುದು.

ಜೀ5 ಆಯಪ್​ನಲ್ಲಿ ಈ ಮೊದಲು ಸಾಕಷ್ಟು ಸಿನಿಮಾಗಳು ಇದೇ ಮಾದರಿಯಲ್ಲಿ ರಿಲೀಸ್ ಆಗಿವೆ. ಸಲ್ಮಾನ್ ಖಾನ್ ನಟನೆಯ ‘ರಾಧೆ’ ಚಿತ್ರವನ್ನು ಇದೇ ರೀತಿಯಲ್ಲಿ ರಿಲೀಸ್ ಮಾಡಲಾಗಿತ್ತು. ಆದರೆ ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ಈ ರೀತಿಯ ಪ್ರಯೋಗ ನಡೆದಿರಲಿಲ್ಲ. ಈಗ ‘ಕೆಜಿಎಫ್ 2’ ಮೂಲಕ ಸಿನಿಮಾಗಳನ್ನು ರೆಂಟ್​​ಗೆ ನೀಡುವ ತಂತ್ರವನ್ನು ಆರಂಭಿಸಲಾಗಿದೆ.

ಭಾರತವೊಂದರಲ್ಲೇ ಕೆಜಿಎಫ್ 2 ಚಿತ್ರದ ಗಳಿಕೆ ಸಾವಿರ ಕೋಟಿ ರೂ. ದಾಟಿದೆ. ಬಾಲಿವುಡ್​ನಲ್ಲಿ ಈ ಸಿನಿಮಾ 427 ಕೋಟಿ ರೂಪಾಯಿ ಬಾಚಿಕೊಂಡಿದೆ. ಈಗಲೂ ಈ ಚಿತ್ರ ಚಿತ್ರಮಂದಿರಗಳಲ್ಲಿ ಹೊಸ ಚಿತ್ರಗಳನ್ನು ಹಿಂದಿಕ್ಕಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಇತರರು ನಟಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!