ಮಲ್ಟಿ ಸ್ಟಾರ್ ಚಿತ್ರಕ್ಕೆ ಹೊಂಬಾಳೆ ಪ್ಲಾನ್

ಹೊಂಬಾಳೆ ಸಂಸ್ಥೆ ಕೆಜಿಎಫ್ 2 ನಂತರ ಮತ್ತೊಂದು ದೊಡ್ಡ ಪ್ಯಾನ್ ಇಂಡಿಯಾ, ಮಲ್ಟಿ ಸ್ಟಾರರ್ ಸಿನಿಮಾ ನಿರ್ಮಿಸಲು ಮುಂದಾಗಿದೆ.

ಈ ಚಿತ್ರದಲ್ಲಿ ಟಾಲಿವುಡ್ ನ ಸೂಪರ್ ಸ್ಟಾರ್ ಗಳಾದ ಪ್ರಭಾಸ್ , ಜ್ಯೂ ಎನ್ ಟಿ ಆರ್ ಇರಲಿದ್ದಾರೆ. ಇದರಲ್ಲಿ ರಾಕಿಂಗ್ ಸ್ಟಾರ್ ಯಶ್ ಕೂಡ ಇರಲಿದ್ದಾರೆ. ಸದ್ಯ ಹೊಂಬಾಳೆ ಸಂಸ್ಥೆಯ ಬಳಿ ಯಶ್, ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಲ್ ಶೀಟ್ ಇದೆ. ಜ್ಯೂ ಎನ್ ಟಿ ಆರ್ ಮುಂದಿನ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಾರೆ. ಹಾಗಾಗಿ ಈ ಮೂವರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡುವುದು ಹೊಂಬಾಳೆಗೆ ದೊಡ್ಡ ವಿಷಯವಲ್ಲ ಎನ್ನಲಾಗಿದೆ.

ಹೊಂಬಾಳೆ ಸಂಸ್ಥೆ ನಿರ್ಮಾಣದ ಕೆಜಿಎಫ್ 2 ಚಿತ್ರದ ಗಳಿಕೆ ಭಾರತವೊಂದರಲ್ಲೇ ಸಾವಿರ ಕೋಟಿ ರೂ. ದಾಟಿದೆ. ಬಾಲಿವುಡ್​ನಲ್ಲಿ ಈ ಸಿನಿಮಾ 427 ಕೋಟಿ ರೂಪಾಯಿ ಬಾಚಿಕೊಂಡಿದೆ. ಈಗಲೂ ಈ ಚಿತ್ರ ಹೊಸ ಚಿತ್ರಗಳನ್ನು ಹಿಂದಿಕ್ಕಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಇತರರು ನಟಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!