ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ಹೊಸ ಸಿನಿಮಾ ‘ಬಾನ ದಾರಿಯಲ್ಲಿ’ ಫಸ್ಟ್ ಲುಕ್ ಇಂದು ಬಿಡುಗಡೆ ಆಗಿದೆ.
ಇಂದು ಬೆಳಿಗ್ಗೆ 9.59 ಕ್ಕೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಗಣೇಶ್ ಅವರು ಕಾಡಿನಲ್ಲಿ ಪ್ರಾಣಿಗಳ ಜೊತೆ ಇರುವ, ಸಮುದ್ರದಲ್ಲಿ ಇರುವ ಪೋಸ್ಟರ್ ರಿಲೀಸ್ ಆಗಿದೆ. ಇದನ್ನು ಗೋಲ್ಡನ್ ಸ್ಟಾರ್ ಗಣೇಶ್ ಇನ್ಸ್ಟಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಇದೊಂದು ಲವ್ ಸ್ಟೋರಿ ಅಲ್ಲ. ಇದು ಪ್ರೀತಿಯ ಕುರಿತ ಕಥೆ ಎಂದು ಹೇಳಿ ಕುತೂಹಲ ಮೂಡಿಸಿದ್ದಾರೆ.
ಪ್ರೀತಂ ಗುಬ್ಬಿ ಜೊತೆ ಗಣೇಶ್ ಈ ಸಿನಿಮಾ ಮೂಲಕ ಒಂದಾಗುತ್ತಿದ್ದಾರೆ. ಮುಂಗಾರು ಮಳೆ, ಗಾಳಿಪಟ ಮುಂತಾದ ಹಿಟ್ ಚಿತ್ರಗಳು ಕತೆಗಳನ್ನು ಕೊಟ್ಟ ಪ್ರೀತಂ ಗುಬ್ಬಿ ನಿರ್ದೇಶನದ ಈ ಸಿನಿಮಾ ಮೇಲೆ ಸಾಕಷ್ಟು ಕುತೂಹಲವಿದೆ.
ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಶ್ರೀ ವಾರೆ ಟಾಕೀಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
ಪ್ರೀತಂ ಗುಬ್ಬಿ ಬರೆದ ಮುಂಗಾರು ಮಳೆ ಚಿತ್ರದ ಕಥೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ವೃತ್ತಿ ಬದುಕಿಗೆ ಮಹತ್ವದ ತಿರುವು ತಂದುಕೊಟ್ಟಿತ್ತು. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಗಾಂಧಿ ನಾಯಕಿಯಾಗಿ ನಟಿಸಿದ್ದರು.
ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗಾಳಿಪಟ 2 ಚಿತ್ರ ಆಗಸ್ಟ್ ತಿಂಗಳಿನಲ್ಲಿ ತೆರೆಗೆ ಬರಲಿದ್ದು, ನಿರೀಕ್ಷೆ ಹುಟ್ಟು ಹಾಕಿದೆ.
___






Be the first to comment