ಮೇ 16ಕ್ಕೆ ಚಾರ್ಲಿ ಟ್ರೈಲರ್

ರಕ್ಷಿತ್ ಶೆಟ್ಟಿ ನಾಯಕ ನಟನೆಯ 777 ಚಾರ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

ಮೇ 16 ರಂದು ಮಧ್ಯಾಹ್ನ 12.12 ಕ್ಕೆ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ.

ಈ ಸಿನಿಮಾದಲ್ಲಿ ರಕ್ಷಿತ್ ಜೊತೆಗೆ ನಾಯಿಯೂ ಪ್ರಮುಖ ಪಾತ್ರವಹಿಸಿದೆ. ಧರ್ಮ ಮತ್ತು ಚಾರ್ಲಿಯ ಭಾವುಕ ಕತೆ ಈ ಸಿನಿಮಾದಲ್ಲಿದೆ. ರಾಜ್ ಬಿ ಶೆಟ್ಟಿ, ಸಂಗೀತ ಶೃಂಗೇರಿ, ದಾನಿಶ್ ಸೇಠ್, ಬಾಬಿ ಸಿಂಹ ಇನ್ನೂ ಹಲವರು ನಟಿಸಿದ್ದಾರೆ.

ಸಿನಿಮಾವನ್ನು ಕಿರಣ್ ರಾಜ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಜೂನ್ 10 ರಂದು ಕನ್ನಡ, ತೆಲುಗು, ತಮಿಳು,ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಗೆ ಬರಲಿದೆ.

ಚಿತ್ರವನ್ನು ಹಿಂದಿಯಲ್ಲಿ ಯುಎಫ್‌ಒ (UFO) ವಿತರಣೆ ಮಾಡಲಿದೆ. ತೆಲುಗಿನಲ್ಲಿ ನಟ ರಾಣಾ ದಗ್ಗುಬಾಟಿ, ತಮಿಳಿನಲ್ಲಿ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜು, ಮಲಯಾಳಂನಲ್ಲಿ ನಟ, ನಿರ್ದೇಶಕ ಪೃಥ್ವಿರಾಜ್‌ ಸುಕುಮಾರನ್‌ ವಿತರಣೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ರಕ್ಷಿತ್‌ ಶೆಟ್ಟಿ ಹೋಮ್‌ ಬ್ಯಾನರ್‌ ಪರಂವಃ ಸ್ಟುಡಿಯೋಸ್ ಅಡಿಯಲ್ಲಿ ಚಿತ್ರ ಮೂಡಿದೆ.

ನೋಬಿನ್‌ ಪೌಲ್‌ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ, ಪ್ರತೀಕ್‌ ಶೆಟ್ಟಿ ಸಂಕಲನ, ಪ್ರಗತಿ ರಿಷಬ್‌ ಶೆಟ್ಟಿ ವಸ್ತ್ರ ವಿನ್ಯಾಸ, ವಿಕ್ರಮ್‌ ಮೋರ್‌ ಸಾಹಸ ಈ ಚಿತ್ರಕ್ಕಿದೆ.

ಚಿತ್ರದ ಹಿಂದಿ ಅವತರಣಿಕೆಗೆ ಸಂಜಯ್‌ ಉಪಾಧ್ಯ ಸಂಭಾಷಣೆ ಒದಗಿಸಿದ್ದಾರೆ. ಹಾಡುಗಳಿಗೆ ಹಿಂದಿಯಲ್ಲಿ ಶೈನಿ ದಾಸ್‌, ಕಾರ್ತಿಕಾ ನೈನನ್‌ ದುಬೆ, ಮಾನ್ಸಾ ಪಾಂಡೆ, ಅಲೆಕ್ಸ್‌ ಡಿಸೋಜಾ, ಸಾಯೇಶ್‌ ಪೈ ಪನಂಡಿಕರ್ ಸಾಹಿತ್ಯ ಒದಗಿಸಿದ್ದಾರೆ.

ಈಗಾಗಲೇ ಸಿನಿಮಾದ ಹಾಡು, ಟೀಸರ್ ಬಿಡುಗಡೆಯಾಗಿದ್ದು ಸಾಕಷ್ಟು ಕುತೂಹಲವನ್ನು ಉಂಟು ಮಾಡಿದೆ. ಮುದ್ದಾದ ನಾಯಿಯ ತುಂಟಾಟ ಈಗಾಗಲೇ ಟೀಸರ್  ಮೂಲಕ ಗಮನ ಸೆಳೆದಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!