“ಪ್ರೀತಿಯ ರಾಯಭಾರಿ” ಚಿತ್ರದ ಮೂಲಕ ಗಮನ ಸೆಳೆದ ನಕುಲ್ ನಾಯಕ ನಟರಾಗಿ ನಟಿಸಿರುವ ನೂತನ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಚಿತ್ರದ ಶೀರ್ಷಿಕೆ ಅನಾವರಣ ಸದ್ಯದಲ್ಲೇ ನಡೆಯಲಿದೆ. ಹಿಂದಿನ ಚಿತ್ರದಲ್ಲಿ ತಮ್ಮ ಸಹಜ ನಟನೆಯ ಮೂಲಕ ನಾಯಕ ನಕುಲ್ ಎಲ್ಲರ ಮನ ಗೆದ್ದಿದ್ದರು. ಈ ಚಿತ್ರ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವ ನಿರೀಕ್ಷೆ ಹೊಂದಲಾಗಿದೆ. ಮಾನ್ವಿತ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಹೆಚ್ ಎಂ ಟಿ ಬಳಿ ನಿರ್ಮಿಸಲಾಗಿದ್ದ ಸೆಟ್ ನಲ್ಲಿ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ನಡೆದಿದೆ.
ಪಿ.ಸಿ.ಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಮೂರು ಹಾಡುಗಳಿದೆ.
ನಾದಕಿರಣ್ ಪಿಕ್ಚರ್ಸ್ ಮೂಲಕ “ಪ್ರೊಡಕ್ಷನ್ ನಂ2” ಎಂಬ ಹೆಸರಿನಲ್ಲಿ ಕಿರಣ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಪ್ರೀತಿಯ ರಾಯಭಾರಿ” ಚಿತ್ರವನ್ನು ಸಹ ಇದೇ ಸಂಸ್ಥೆ ನಿರ್ಮಿಸಿತ್ತು.
___

Be the first to comment