ಚಿತ್ರ: ಅವತಾರ ಪುರುಷ
ನಿರ್ದೇಶನ: ಸಿಂಪಲ್ ಸುನಿ
ಪಾತ್ರವರ್ಗ: ಶರಣ್, ಆಶಿಕಾ ರಂಗನಾಥ್, ಸಾಯಿ ಕುಮಾರ್, ಶ್ರೀನಗರ ಕಿಟ್ಟಿ, ಭವ್ಯಾ ಇತರರು.
ರೇಟಿಂಗ್: 3.5/ 5
ಮಂತ್ರ-ತಂತ್ರಗಳ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳ ಜೊತೆಗೆ ಕಾಮಿಡಿ ಝಲಕ್ ನ ಮಿಶ್ರಣ ಆಗಿ ಅವತಾರ ಪುರುಷ ಗಮನ ಸೆಳೆಯುತ್ತದೆ.
ಸಿನಿಮಾಗಳಲ್ಲಿ ಜೂನಿಯರ್ ಅರ್ಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ಅನೀಲನಿಗೆ (ಶರಣ್) ರಿಯಲ್ ಲೈಫ್‌ನಲ್ಲಿ ಮಗನ ಪಾತ್ರ ಮಾಡುವ ಅವಕಾಶ ಈ ಸಿನಿಮಾದ ಪ್ರಮುಖ ಅಂಶ. ಚಿಕ್ಕ ವಯಸ್ಸಿನಲ್ಲೇ ಕಾಣೆಯಾದ ರಾಮ ಜೋಯಿಸ್ – ಸುಶೀಲಾ ದಂಪತಿಯ ಮನೆಗೆ ಮಗನಾಗಿ ಬರುವ ಅನೀಲನಿಗೆ ವಾಮಾಚಾರ ಮಾಡುವ ಪಡೆ ಎದುರಾಗುತ್ತದೆ. ಅನೀಲನಿಗೂ ಆ ಮನೆಗೂ ಏನು ಸಂಬಂಧ ಎನ್ನುವುದನ್ನು ನಿರ್ದೇಶಕರು ಮಂತ್ರ-ತಂತ್ರಗಳ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳ ಮೂಲಕ ಉತ್ತರ ನೀಡುತ್ತಾ ಹೋಗುತ್ತಾರೆ.
ಛಾಯಾಗ್ರಾಹಕ ವಿಲಿಯಂ ಡೇವಿಡ್ ಸೊಗಸಾದ ಛಾಯಾಗ್ರಹಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಸೂಪರ್. ಸುನಿ ಬರೆದಿರುವ ಕಥೆಗೆ ಇನ್ನಷ್ಟೂ ಬಿಗಿತನದ ನಿರೂಪಣೆ ಬೇಕಿತ್ತು. ಆದರೂ ಕಾಮಿಡಿ ಡೈಲಾಗ್ ಅದನ್ನು ಮುಚ್ಚಿ ಹಾಕಿದೆ. ಪಾರ್ಟ್ 2ಗೆ ಬೇಕಾದ ಟ್ವಿಸ್ಟ್ ಕ್ಲೈಮ್ಯಾಕ್ಸ್‌ನಲ್ಲಿದೆ.
ಶರಣ್ ಸಖತ್ ರಂಜಿಸುತ್ತಾರೆ. ಸಿರಿ ಪಾತ್ರಕ್ಕೆ ಆಶಿಕಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾಮ ಜೋಯಿಸ್ ಪಾತ್ರಕ್ಕೆ ಸಾಯಿಕುಮಾರ್ ಗಾಂಭೀರ್ಯತೆ ತಂದುಕೊಟ್ಟರೆ, ಮಗನಿಗಾಗಿ ಮಿಡಿಯುವ ಸುಶೀಲಾ ಪಾತ್ರದಲ್ಲಿ ಭವ್ಯಾ ಮೋಡಿ ಮಾಡಿದ್ದಾರೆ.
ಸಾಧು ಕೋಕಿಲ, ವಿಜಯ್ ಚೆಂಡೂರು, ಬಿ. ಸುರೇಶ, ಬಾಲಾಜಿ ಮನೋಹರ್, ಅಶುತೋಷ್ ರಾಣಾ ಸಿಕ್ಕ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಥೆಗೆ ಟ್ವಿಸ್ಟ್ ನೀಡುವ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಮಿಂಚಿದ್ದಾರೆ.
ಮೊದಲ ಭಾಗ ಪ್ರೇಕ್ಷಕರಲ್ಲಿ ಎರಡನೇ ಭಾಗದ ಬಗ್ಗೆ ಕುತೂಹಲವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.
_____
Be the first to comment