ಬಾಲಿವುಡ್ ನ ನಂಬರ್ 2 ಚಿತ್ರವಾದ ಕೆಜಿಎಫ್ 2

ಪ್ರಶಾಂತ್‌ ನೀಲ್‌ ನಿರ್ದೇಶನದ ಕೆಜಿಎಫ್-‌2 ಚಿತ್ರ ಬಾಲಿವುಡ್‌ ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ 2ನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಬಾಸ್ ನಟನೆಯ ಬಾಹುಬಲಿ-2 ಚಿತ್ರ 510.99 ಕೋಟಿ ರೂ. ಗಳಿಸಿ ಮೊದಲ ಸ್ಥಾನ ಪಡೆದಿದೆ. ಕೆಜಿಎಫ್-‌2 ಚಿತ್ರ 389.10 ಕೋಟಿ ಬಾಚಿ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ದಂಗಲ್ ಚಿತ್ರ 387.38 ಕೋಟಿ ರೂ. ಸಂಗ್ರಹಿಸಿ ಮೂರನೇ ಸ್ಥಾನಕ್ಕೆ ಕುಸಿದಿದೆ.

ಕೆಜಿಎಫ್‌-2 ಚಿತ್ರ ಅಮಿರ್‌ ಖಾನ್‌ ಅಭಿನಯದ ದಂಗಲ್ ಚಿತ್ರದ ಗಳಿಕೆಯ ದಾಖಲೆಯನ್ನು ಮುರಿದು 2ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಈ ಚಿತ್ರ ಎಸ್‌ ಎಸ್‌ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರದ ನಂತರದ ಸ್ಥಾನದಲ್ಲಿದ್ದು , ಈ ದಾಖಲೆಯನ್ನು ಮುರಿದು ಮೊದಲ ಸ್ಥಾನಕ್ಕೆ ಲಗ್ಗೆ ಹಾಕುವುದೇ ಎನ್ನುವ ಕುತೂಹಲ ಮೂಡಿಸಿದೆ.

ಕೆಜಿಎಫ್‌-2 ಚಿತ್ರ 1000 ಕೋಟಿ ರೂ. ದಾಟಿ ಮುನ್ನುಗ್ಗುತ್ತಿದ್ದು, ಚಿತ್ರ ಬಿಡುಗಡೆ ಆಗಿ 15 ದಿನ ಕಳೆದರೂ ಗಳಿಕೆಯ ನಾಗಾಲೋಟ ಮುಂದುವರಿದಿದೆ. ಬಾಲಿವುಡ್‌ ಸ್ಟಾರ್‌ ನಟರಾದ ಟೈಗರ್‌ ಶ್ರಾಫ್‌ ಅಭಿನಯದ ಹಿರೋಪತಿ-2, ಅಜಯ್‌ ದೇವಗನ್‌ ಅಭಿನಯಿಸಿದ ರನ್‌ ವೇ34 ಚಿತ್ರ ಬಿಡುಗಡೆ ಆದರೂ ಕೆಜಿಎಫ್2 ಕಲೆಕ್ಷನ್‌ ಗೆ ಅಡಚಣೆ ಆಗಿಲ್ಲ.

ಕೆಜಿಎಫ್-‌2 ಚಿತ್ರ ಬಿಡುಗಡೆ ಆದ ಮೂರು ವಾರದಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಿದೆ. ಈ ಚಿತ್ರ ಕನಿಷ್ಠ 50 ದಿನ ಓಡಿದರೂ ಗಳಿಕೆಯಲ್ಲಿ ಮೊದಲ ಸ್ಥಾನ ಅಲಂಕರಿಸುವ ಸಾಧ್ಯತೆ ಇದೆ ಎಂದು ಬಾಕ್ಸ್ ಆಫೀಸ್ ವಿಶ್ಲೇಷಕರು ಹೇಳಿದ್ದಾರೆ.

ಕೆಜಿಎಫ್ 2 ಚಿತ್ರದಲ್ಲಿ ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಇತರರು ನಟಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!