ರಜನಿಕಾಂತ್ ಅವರ ಮುಂದಿನ ಚಿತ್ರ ತಲೈವರ್ 169 ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುವ ಸಾಧ್ಯತೆ ಇದೆ.
ಬೀಸ್ಟ್ ನಿರ್ದೇಶಕ ನೆಲ್ಸನ್ ಈ ಚಿತ್ರ ನಿರ್ದೇಶಿಸಲಿದ್ದಾರೆ. ಚಿತ್ರ ತಂಡ ಪ್ರಮುಖ ನಟರನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಲು ಶಿವರಾಜಕುಮಾರ್ ಅವರನ್ನು ಚಿತ್ರತಂಡ ಸಂಪರ್ಕಿಸಿದೆ.
ನಿರ್ದೇಶಕ ನೆಲ್ಸನ್ ಈ ಚಿತ್ರಕ್ಕಾಗಿ ಶಿವಣ್ಣ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಬಹಿರಂಗ ಆಗಿದೆ. ಶಿವಣ್ಣ ಜೊತೆ ಚರ್ಚೆ ನಡೆಸಲು ನಿರ್ದೇಶಕರು ಶೀಘ್ರದಲ್ಲೇ ಬೆಂಗಳೂರಿಗೆ ಬರುವ ನಿರೀಕ್ಷೆಯಿದೆ.
ರಜನಿಕಾಂತ್ ಅವರು ಕನ್ನಡ ಸಿನಿಮಾರಂಗ ಅಲ್ಲದೇ ರಾಜ್‌ಕುಮಾರ್ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಎಲ್ಲವೂ ತಾಳೆ ಆದರೆ ರಜನೀಕಾಂತ್ ಮತ್ತು ಶಿವಣ್ಣ ಮೊದಲ ಬಾರಿಗೆ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡು ಚಿತ್ರ ರಸಿಕರಿಗೆ ಮನರಂಜನೆ ನೀಡಲಿದ್ದಾರೆ.
ಸದ್ಯ ಬೈರಾಗಿ ಚಿತ್ರದ ಬಿಡುಗಡೆಗೆ ಕಾಯುತ್ತಿರುವ ಶಿವಣ್ಣ ಹರ್ಷ ನಿರ್ದೇಶನದ ವೇದಾ ಶೂಟಿಂಗ್ ನಲ್ಲಿದ್ದಾರೆ. ಇದು ಶಿವಣ್ಣ ಅವರ 125ನೇ ಚಿತ್ರವಾಗಿದೆ. ಯೋಗರಾಜ್ ಭಟ್ ಅವರ ಮುಂದಿನ ಸಿನಿಮಾದಲ್ಲಿ ಶಿವರಾಜಕುಮಾರ್ ನಟಿಸಲಿದ್ದಾರೆ.
____

Be the first to comment