ಬೈರಾಗಿ ಹಾಡು ರಿಲೀಸ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬೈರಾಗಿ ಚಿತ್ರದ ಹಾಡು ರಿಲೀಸ್ ಆಗಿದ್ದು, ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಿವಣ್ಣ ಅಭಿನಯದ ಬಗ್ಗೆ ಪ್ರಶಂಸೆಗಳು ವ್ಯಕ್ತವಾಗಿವೆ. ಈ ವಯಸ್ಸಿನಲ್ಲೂ ಶಿವಣ್ಣ ಅವರು ಅದ್ಭುತವಾಗಿ ನೃತ್ಯ ಮಾಡಿರುವುದಕ್ಕೆ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

‘ನಕರನಟ’ ಎಂದು ಶುರುವಾಗುವ ಈ ಹಾಡು ನಾಯಕನ ಪಾತ್ರವನ್ನು ವರ್ಣನೆ ಮಾಡುತ್ತದೆ.ಹಾಡಿನ ಸಾಹಿತ್ಯ ಮತ್ತು ಸಂಗೀತ ಎರಡೂ ವಿಭಿನ್ನವಾಗಿವೆ. ಈ ಹಾಡಿಗೆ ಸಂಗೀತ ನಿರ್ದೇಶನ ಅನೂಪ್ ಸೀಳಿನ್ ಮಾಡಿದ್ದಾರೆ. ಅನೂಪ್ ಪ್ರಯೋಗಕ್ಕೆ ಕೇಳುಗರು ಜೈಕಾರ ಹಾಕುತ್ತಿದ್ದಾರೆ. ಹಾಡಿನಲ್ಲಿ ವಿಭಿನ್ನ ಎರಿಳಿತಗಳು ಇದ್ದು ಡಿಫ್ರೆಂಟ್ ಫೀಲ್ ಕೊಡುತ್ತಿದೆ.

‘ಬೈರಾಗಿ’ ಚಿತ್ರದ ಪೋಸ್ಟರ್ ಈ ಹಿಂದೆ ರಿಲೀಸ್ ಆಗಿತ್ತು. ಚಿತ್ರದ ಟ್ರೈಲರ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರ ತಂಡ ಬಹುತೇಕ ಎಲ್ಲಾ ಕೆಲಸಗಳನ್ನು ಮುಗಿಸಿದ್ದು, ರಿಲೀಸ್‌ಗೆ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯದಲ್ಲೇ ಸಿನಿಮಾದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡುವ ನಿರೀಕ್ಷೆ ಹೊಂದಲಾಗಿದೆ.

ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಜೊತೆ ಡಾಲಿ ಧನಂಜಯ್​ ಅಭಿನಯಿಸಿದ್ದಾರೆ. ನಿರ್ದೇಶಕ ವಿಜಯ್​ ಮಿಲ್ಟನ್​ ನಿರ್ದೇಶನ ಮಾಡಿದ್ದಾರೆ. ಯಶ್​ ಶಿವಕುಮಾರ್​, ಅಂಜಲಿ, ಪೃಥ್ವಿ ಅಂಬರ್​ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕೃಷ್ಣ ಸಾರ್ಥಕ್​ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಭಜರಂಗಿ 2 ಚಿತ್ರದ ಬಳಿಕ ಬಿಡುಗಡೆ ಆಗುತ್ತಿರುವ ಶಿವಣ್ಣ ನಟನೆಯ ಚಿತ್ರ ಇದಾಗಿದೆ. ಅಭಿಮಾನಿಗಳು ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!