ವೆಬ್ ಸೀರೀಸ್ ಕಡೆ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೆಬ್ ಸೀರಿಸ್‌ ಕಡೆಗೆ ಮುಖ ಮಾಡಿದ್ದಾರೆ. ಶಿವಣ್ಣ ಮೊದಲ ವೆಬ್ ಸೀರಿಸ್‌ ನ್ನು ಮಗಳು ನಿವೇದಿತಾ ನಿರ್ಮಾಣ ಮಾಡುತ್ತಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶಿವಣ್ಣ ಹೊಸ ಪ್ರಯತ್ನಕ್ಕೆ ಮುಂದಾಗಿರುವುದು ಅಭಿಮಾನಿಗಳಿಗೆ ಖುಷಿಯನ್ನು ಉಂಟುಮಾಡಿದೆ.

ಶಿವಣ್ಣ ಅವರ ಶ್ರೀ ಮುತ್ತು ಸಿನಿ ಸರ್ವಿಸ್ ನಿರ್ಮಾಣ ಸಂಸ್ಥೆಯಿಂದ ವೆಬ್ ಸೀರಿಸ್ ಮೂಡಿ ಬರುತ್ತಿದೆ. ಶಿವಣ್ಣ ನಟಿಸುತ್ತಿರುವ ವೆಬ್ ಸೀರಿಸ್ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಿಲ್ಲ. ಈಗಾಗಲೇ ಕಥೆ ಸಿದ್ದವಾಗಿದ್ದು ಸಧ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಯಾರು ನಿರ್ದೇಶನ ಮಾಡಲಿದ್ದಾರೆ, ಯಾರೆಲ್ಲ ನಟಿಸಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಈಗ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಹೆಚ್ಚುತ್ತಿವೆ. ಇವುಗಳ ನಡುವೆ ಪೈಪೋಟಿಯೂ ಜಾಸ್ತಿಯಾಗಿದೆ. ಉತ್ತಮ ವೆಬ್ ಸೀರೀಸ್ ನಿರ್ಮಾಣ ಮಾಡುವ ಬಗ್ಗೆ ನಿರ್ದೇಶಕರು, ಕಲಾವಿದರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಶಿವಣ್ಣ ಪುತ್ರಿ ನಿವೇದಿತಾ ಈಗಾಗಲೇ ಐ ಹೇಟ್ ಯು, ರೋಮಿಯೋ, ಬೈ ಮಿಸ್ ಟೇಕ್, ಹನಿಮೂನ್ ವೆಬ್ ಸೀರಿಸ್‌ಗಳನ್ನು ನಿರ್ಮಾಣ ಮಾಡಿದ್ದಾರೆ.

ಶಿವಣ್ಣ ಕೊನೆಯದಾಗಿ ಭಜರಂಗಿ-2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಚಿತ್ರ ಬಿಡುಗಡೆ ಆದ ದಿನದಂದು ಶಿವಣ್ಣ ಸಹೋದರ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡರು. ಬಳಿಕ ಶಿವಣ್ಮ ಅಪ್ಪು ನಟನೆಯ ಜೇಮ್ಸ್ ಮೂಲಕ ವಿಶೇಷ ಅತಿಥಿಯಾಗಿ ತೆರೆಮೇಲೆ ಕಾಣಿಸಿಕೊಂಡರು. ಸದ್ಯ ಶಿವಣ್ಣ ಬಳಿ ಭೈರಾಗಿ, ನೀ ಸಿಗುವರೆಗೂ, ವೇದಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!