ಕೆಜಿಎಫ್ 2 ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 1 ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.
ಭಾರತೀಯ ಸಿನಿಮಾ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡದ ಸಿನಿಮಾ ಎನ್ನುವ ಹೆಮ್ಮೆಗೆ ಕೆಜಿಎಫ್ 2 ಸಿನಿಮಾ ಪಾತ್ರವಾಗಿದೆ.
‘ಕೆಜಿಎಫ್ 2’ ಏಪ್ರಿಲ್ 14ರಂದು ರಿಲೀಸ್ ಆಯಿತು. ಕೋವಿಡ್ ಇಳಿಮುಖ ಆದ್ದರಿಂದ ಜನರು ಸಿನಿಮಾ ಮಂದಿರಗಳಿಗೆ ಬಂದು ಸಿನಿಮಾ ವೀಕ್ಷಿಸಿದರು. ‘ಕೆಜಿಎಫ್ 2’ ಜತೆ ತೆರೆಗೆ ಬಂದ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ಫ್ಲಾಪ್ ಆದ ಕಾರಣ ತಮಿಳುನಾಡಿನಲ್ಲಿ ‘ಕೆಜಿಎಫ್ 2’ಗೆ ಹೆಚ್ಚು ಚಿತ್ರಮಂದಿರಗಳು ಸಿಕ್ಕವು. ಹಾಲಿವುಡ್ನ ಯಾವುದೇ ಸಿನಿಮಾ ಈ ಸಂದರ್ಭದಲ್ಲಿ ತೆರೆಗೆ ಬರದ ಕಾರಣ ಹೊರ ದೇಶಗಳಲ್ಲೂ ಜನರು ಈ ಸಿನಿಮಾ ವೀಕ್ಷಿಸಿದರು. ಇದರಿಂದ ‘ಕೆಜಿಎಫ್ 2’ ದಾಖಲೆಯ ಕಲೆಕ್ಷನ್ ಮಾಡುವಲ್ಲಿ ಸಹಕಾರಿಯಾಯಿತು.
ಬಾಲಿವುಡ್ನಲ್ಲಿ ಕೆಜಿಎಫ್ 2 ಇದುವರೆಗೆ 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿ ಕೆಲ ವಾರಗಳಿಂದ ತೆರೆಗೆ ಬಂದ ಸಿನಿಮಾಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿಲ್ಲ. ಇದು ಚಿತ್ರದ ಗಳಿಕೆಗೆ ಸಹಕಾರಿ ಆಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ದಂಗಲ್, ಬಾಹುಬಲಿ 2 ಹಾಗೂ ‘ಆರ್ಆರ್ಆರ್’ ಬಳಿಕ 1000 ಕೋಟಿ ಕ್ಲಬ್ ಸೇರಿದ ನಾಲ್ಕನೇ ಸಿನಿಮಾ ಕೆಜಿಎಫ್ 2 ಆಗಿದೆ ಎಂದು ಹೇಳಲಾಗಿದೆ.
ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ.
Be the first to comment