ಡಾ.ರಾಜ್ ಕುಮಾರ್ ಅವರ ಮೊಮ್ಮಗ ಧೀರೇನ್ ರಾಮ್ಕುಮಾರ್ ಹೊಸ ಸಿನಿಮಾ ಘೋಷಣೆಯಾಗಿದೆ.
ಪುನೀತ್ ರಾಜ್ಕುಮಾರ್ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’ ಸಿನಿಮಾ ನಿರ್ಮಾಣ ಮಾಡಿದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹೊಸ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ‘ಧೀರೆನ್ ರಾಮ್ಕುಮಾರ್’ ಈಗಾಗಲೇ ‘ಶಿವ 143’ ಸಿನಿಮಾದಲ್ಲಿ ನಟಿಸಿದ್ದು, ಆ ಸಿನಿಮಾ ಬಿಡುಗಡೆ ಆಗುವ ಮುನ್ನ ಹೊಸ ಸಿನಿಮಾಕ್ಕೆ ನಾಯಕನಾಗಿ ಆಯ್ಕೆ ಆಗಿದ್ದಾರೆ.
‘ಬಡವ ರಾಸ್ಕಲ್’ ಸಿನಿಮಾ ನಿರ್ದೇಶಕ ಶಂಕರ್ ಅವರು ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.
”ಅಣ್ಣಾವ್ರ ಕುಟುಂಬದ ಬಗ್ಗೆ ಜನರಿಗೆ ಉತ್ತಮ ಅಭಿಪ್ರಾಯವಿದೆ. ಅದನ್ನು ಗಮನದಲ್ಲಿಟ್ಟುಕೊಂಡೆ ಕೌಟುಂಬಿಕ ಕತೆ ಮಾಡಿಕೊಂಡಿದ್ದೇನೆ. ‘ಬಡವ ರಾಸ್ಕಲ್’ ಸಿನಿಮಾದಲ್ಲಿಯೂ ಕೌಟುಂಬಿಕ ಕತೆ ಹಿಟ್ ಆಗಿತ್ತು. ಇಲ್ಲೂ ಅದೇ ಮಾದರಿ ಕೌಟುಂಬಿಕ ಕತೆ ಇರಲಿದೆ” ಎಂದು ಶಂಕರ್ ಹೇಳಿದ್ದಾರೆ.
”ಧೀರೇನ್ ನೀವು ಹೇಳಿದಂತೆ ನಟಿಸುತ್ತೇನೆ ಎಂದು ತಮ್ಮನ್ನು ಸಿನಿಮಾಕ್ಕೆ ಸಮರ್ಪಿಸಿಕೊಂಡಿದ್ದಾರೆ. ಧೀರೇನ್ ಅವರ ಸಿನಿಮಾ ಮುಗಿದ ಬಳಿಕ ಮತ್ತೆ ಡಾಲಿ ಧನಂಜಯ್ ಅವರಿಗಾಗಿ ಹೊಸ ಸಿನಿಮಾ ಮಾಡಲಿದ್ದೇನೆ” ಎಂದಿದ್ದಾರೆ ಶಂಕರ್.
‘ಶಿವ 143’ ಸಿನಿಮಾ ತೆಲುಗಿನ ‘ಆರ್ಎಕ್ಸ್ 143’ ಸಿನಿಮಾದ ರೀಮೇಕ್ ಎನ್ನಲಾಗಿದ್ದು ಸಾಕಷ್ಟು ಹಸಿ ಬಿಸಿ ದೃಶ್ಯಗಳಲ್ಲಿ ಧೀರೇನ್ ನಟಿಸಿದ್ದಾರೆ. ಸಿನಿಮಾದ ನಾಯಕಿ ಮಾನ್ವಿತಾ ಆಗಿದ್ದಾರೆ.
____
Be the first to comment