ಹಸಿವು ಮತ್ತು ಅರಿವು ಆಡಿಯೋ ಅನಾವರಣ

ನೃತ್ಯ ನಿರ್ದೇಶಕ ಎಂ.ಆರ್. ಕಪಿಲ್ ಅವರ ನಿರ್ದೇಶನದ ಹಸಿವು ಮತ್ತು ಅರಿವು ಚಲನ ಚಿತ್ರದ ಹಾಡುಗಳ ದ್ವನಿ ಸುರುಳಿ ಬಿಡುಗಡೆ ಸಮಾರಂಭ ಕಳೆದ ಶನಿವಾರ ಕಂಠೀರವ ಸ್ಟುಡಿಯೋ ಆವರಣಲ್ಲಿ ನೆರವೇರಿತು. ಈ ಹಿಂದೆ ಹಳ್ಳಿ ಸೂಗಡು ಎಂಬ ಹೆಸರಿನಲ್ಲಿ ಸಾಹಿತಿ ಡಾ||ದೊಡ್ಡರಂಗೇಗೌಡರ ಬಯೋಪಿಕ್ ಆಧಾರಿತ ಚಲನ ಚಿತ್ರವನ್ನು ನಿರ್ದೇಶಿಸಿದ್ದ ಕಪಿಲ್ ಅವರು ಈ ಬಾರಿ ದೇಶ ಹಾಗು ಪ್ರಪಂಚವನ್ನು ಕಾಡುತ್ತಿರುವ ಗಂಭೀರವಾದ ಸಮಸ್ಯೆಯೊಂದನ್ನು ಇಟ್ಟುಕೊಂಡು ಈ ಸಿನಿಮಾ ನಿರ್ದೇಶನ ಮಾಡಿದಾರೆ. ಕಪಿಲ್ ಅವರೇ ಕಥೆ ಚಿತ್ರಕಥೆ, ಸಂಭಾಷಣೆ ರಚಿಸಿರುವ ಈ ಚಿತ್ರದ ಹಾಡುಗಳನ್ನು

ಸಿನಿ ಮ್ಯಾಸಿಕ್ ಕಾಂಪನಿ ಮಾರುಕಟ್ಟೆಗೆ ತಂದಿದೆ ಪತ್ರಕರ್ತ ಜಗದೀಶ ಅವರು ಸಾರತ್ಯದಲಿ ಆರಂಭ ಗೊಂಡಿರುವ ಸಿನಿಮ್ಯಾಜಿûಕ್ ಮೂಲಕ ಹೊರ ಬರುತ್ತಿರುವ ಮೊದಲ ಮ್ಯೂಸಿಕ್ ಆಲ್ಬಂ ಇದಾಗಿದೆ. ಶ್ರೀಮತಿ ಶೋಭಾವತಿ ಕಪಿಲ್ ಅವರ ನಿರ್ಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಸಮಾಜ ಸೇವಕರಾದ ಎಸ್.ನಾಗರಾಜ್ ಅನೇಕಲ್ ಅವರ ಸಹಕಾರವಿದೆ. ಜಿ.ರಾಘವೇಂದ್ರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಉದಯಲೇಖಾ ಅವರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಅನ್ನದ ಹಸಿವು ಅನ್ನದ ಅರಿವು ಎಂಬ ಟೈಟಲ್ ಸಾಂಗ್ ಮಾತ್ರ ಇದೆ. ಗಾಯಕ ಬದ್ರಿಪ್ರಸಾದ ಈ ಹಾಡಿಗೆ ದನಿಯಾಗಿದ್ದಾರೆ. ಭುವನೇಶ್ವರಿ ಬಲರಾಮ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಹಿರಿಯ ನಟ ಸುಚೇಂದ್ರ ಪ್ರಸಾದ್ ಹಾಗು ಎಸ್.ನಾಗರಾಜ್ ಸೇರಿ ಈ ಚಿತ್ರದ ಹಾಡಿನ ದ್ವನಿಸುರುಳಿಯನ್ನು ಲೋಕಾರ್ಪಣೆ ಮಾಡಿದರು ಹಸಿವು ಎನ್ನುವುದು ಒಂದು ಸಾಮಾಜಿಕ ಸಮಸ್ಯೆಯಾಗಿದ್ದು ಉಳ್ಳವರು ಅನ್ನವನ್ನು ಎಂದು ವ್ಯರ್ಥಮಾಡಬೇಡಿ. ಹಸಿದವರಿಗೆ ನೀಡಿ ಅವರ ಹಸಿವಿನ ದಾಹ ತೀರಿಸಿ. ಇದು ಕೂಡ ಒಂದು ರೀತಿಯ ದೇಶಸೇವೆ ಎಂಬುದನ್ನು ಹಸಿವು ಮತ್ತು ಅರಿವು ಎಂಬ ಈ ಚಿತ್ರದ ಮೂಲಕ ನಿರ್ದೇಶಕ ಹಾಗು ನಿರ್ಮಾಪಕರೂ ಆಗಿರುವ ಒ.ಖ.ಕಪಿಲ್ ಹೇಳ ಹೊರಟಿದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!