ಗಮನ ಸೆಳೆಯುತ್ತಿದೆ ಪುರುಷೋತ್ತಮ ಟ್ರೈಲರ್

ಜಿಮ್ ರವಿ ನಟನೆಯ ಪುರುಷೋತ್ತಮ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು ಗಮನ ಸೆಳೆಯುತ್ತಿದೆ.

ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಟ್ರೈಲರ್ ಬಿಡುಗಡೆ ಮಾಡಿದ್ದು ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಮೇ 6ರಂದು ಚಿತ್ರ ತೆರೆಯ ಮೇಲೆ ಬರಲಿದೆ.

ಛಾಯಾಗ್ರಾಹಕ ಕುಮಾರ್ ಅವರ ಪ್ರಕಾರ, ಪುರುಷೋತ್ತಮ ಟೈಟಲ್ ಹೇಳಿ ಮಾಡಿಸಿದಂತಿದೆ. ಗೃಹಸ್ಥನಾಗಿ ತನ್ನ ಕುಟುಂಬವನ್ನು ಹೇಗೆ ಕಾಪಾಡಿಕೊಳ್ಳುತ್ತಾನೆಂಬುದನ್ನು ಹೇಳಲಾಗಿದೆ. ಗಂಭೀರವಾದ ಅಂಶವನ್ನು ಥ್ರಿಲ್ಲರ್ ಮೂಲಕ ತೋರಿಸಲಾಗಿದೆ.

ನಿರ್ಮಾಪಕ ಹಾಗೂ ನಾಯಕನಟ ಜಿಮ್ ರವಿ ಅವರ ಪ್ರಕಾರ, ಶೋಷಣೆಗೊಳಗಾದ ಹೆಣ್ಣನ್ನು ಗಂಡ ಸಾಥ್ ಕೊಟ್ಟು ಯಾವ ರೀತಿ ಕಾಪಾಡುತ್ತಾನೆ. ಗಂಡನ ಜವಾಬ್ದಾರಿ ಎಷ್ಟು ಸೂಕ್ಷ್ಮ ಇರುತ್ತದೆ ಎನ್ನುವುದು ಸಿನಿಮಾದ ಏಳೆಯಾಗಿದೆ.

ಕಳೆದ 3 ದಶಕದಿಂದ 70 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜಿಮ್‌ ತರಬೇತಿ ನೀಡಿರುವ ರವಿ, “ರವೀಸ್‌ ಜಿಮ್‌ ಪ್ರೊಡಕ್ಷನ್ಸ್‌’ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದು ಪುರುಷೋತ್ತಮ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು, ಚಿತ್ರ ಬಿಡುಗಡೆಗೆ ಸಿದ್ಧ ಆಗಿದೆ.

ಎಸ್‌.ವಿ ಅಮರನಾಥ್‌ ಅವರು “ಪುರುಷೋತ್ತಮ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ಸಂಯೋಜಿಸಿದ್ದಾರೆ. ನಾಯಕಿ ಆಗಿ ಅಪೂರ್ವ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!