ರಿವೀಲ್ ಆದ ಸಮಂತಾ ಶಾಕುಂತಲಾ ಲುಕ್

ಸಮಂತಾ ಹುಟ್ಟುಹಬ್ಬದ ಪ್ರಯುಕ್ತ ಶಾಕುಂತಲಾ ಪೋಸ್ಟರ್ ರಿಲೀಸ್ ಆಗಿದೆ.

ಸಮಂತಾ ಶಾಕುಂತಲಾ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಮಂತಾ ಶಾಕುಂತಲಂ ಸಿನಿಮಾದಲ್ಲಿ ಶಾಕುಂತಲ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಶಾಕುಂತಲಂ ಸಿನಿಮಾದ ಮೊದಲ ಲುಕ್ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಶಾಕುಂತಲ ಹಾಗೆ ಕಾಣಿಸುತ್ತಿರುವ ಸಮಂತಾ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಳಿ ಬಣ್ಣದ ಬಟ್ಟೆ ಧರಿಸಿರುವ ಸಮಂತಾ ಉದ್ದವಾದ ಕೂದಲು ಬಿಟ್ಟು ಬಿಳಿ ಹೂವುಗಳಿಂದ ಕೂದಲನ್ನು ಅಲಂಕರಿಸಿದ್ದಾರೆ. ಕಂಬಕ್ಕೆ ಒರಗಿ ನಿಂತು ಯಾರದೋ ಬರುವಿಕೆಯನ್ನು ಕಾಯುತ್ತಿರುವ ಲುಕ್ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ. ಅಭಿಮಾನಿಗಳು ಶಾಕುಂತಲ ಫೋಟೋ ಶೇರ್ ಮಾಡಿ ವಿಶ್ ಮಾಡುತ್ತಿದ್ದಾರೆ.

ಪೋಸ್ಟರ್ ಶೇರ್ ಮಾಡಿರುವ ಸಿನಿಮಾತಂಡ ಸಮಂತಾ ಅವರಿಗೆ ಹುಟ್ಟುಹಬ್ಬದ ವಿಶ್ ಮಾಡಿದೆ. ಶಾಕುಂತಲಂ ನಿರ್ದೇಶಕ ಗುಣಶೇಖರನ್. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ.

ಸಮಂತಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಗ ಚೈತನ್ಯರಿಂದ ವಿಚ್ಛೇದನ ಪಡೆದ ಬಳಿಕ ಸಿನಿಮಾರಂಗದಲ್ಲಿ ಹೆಚ್ಚು ಸಕ್ರೀಯರಾಗಿದ್ದು ದಕ್ಷಿಣಭಾರತದ ಸಿನಿಮಾರಂಗ ಮಾತ್ರವಲ್ಲದೆ ಬಾಲಿವುಡ್ ನಲ್ಲೂ ಬ್ಯುಸಿಯಾಗಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!