ಹೆಡ್ ಬುಷ್ ಶೂಟಿಂಗ್ ಮುಕ್ತಾಯ

ಡಾಲಿ ಧನಂಜಯ್ ನಾಯಕ, ನಿರ್ಮಾಪಕ ಆಗಿರುವ ಹೆಡ್ ಬುಷ್ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ.

ಧನಂಜಯ್ ಈ ಸಿನಿಮಾದಲ್ಲಿ ಡಾನ್ ಜಯರಾಜ್ ಪಾತ್ರ ನಿರ್ವಹಿಸುತ್ತಿದ್ದಾರೆ. ಜಯರಾಜ್ ಜೀವನಕಥೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ.

ಈ ಸಿನಿಮಾದಲ್ಲಿ ಧನಂಜಯ್ ಜೊತೆಗೆ ಲೂಸ್ ಮಾದ ಯೋಗಿ, ರಘು ಮುಖರ್ಜಿ, ಪಾಯಲ್ ರಜಪೂತ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಧನಂಜಯ್, ಬೆಳ್ಳಿ ಪರದೆಯ ಮೇಲೆ ಒಂದೊಂದು ಪಾತ್ರಗಳೂ ಮಿಂಚಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿನಿಮಾದ ಕಥೆಯನ್ನು ಅಗ್ನಿ ಶ್ರೀಧರ್ ಬರೆದಿದ್ದಾರೆ. ಸಿನಿಮಾವನ್ನು ಶೂನ್ಯ ಅವರು ನಿರ್ದೇಶಿಸಿದ್ದಾರೆ. ಧನಂಜಯ್ ಅಲ್ಲದೇ ರವಿಚಂದ್ರನ್, ದೇವರಾಜ್, ಪಾಯಲ್ ರಜಪೂತ್, ಯೋಗಿ, ವಸಿಷ್ಠ ಸಿಂಹ, ಶ್ರುತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಅವರು ತಾರಾಗಣದಲ್ಲಿದ್ದಾರೆ.

ಪ್ಯಾನ್ ಸಿನಿಮಾ ಆಗಿರುವ ಚಿತ್ರಕ್ಕಾಗಿ 2 ಕೋಟಿ ರೂ. ವೆಚ್ಚದಲ್ಲಿ ದುಬಾರಿ ಸೆಟ್‌ನ್ನು ಬೆಂಗಳೂರಿನ ಚಿಕ್ಕಮಾರನಹಳ್ಳಿಯ ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನ 80-90ರ ದಶಕದಲ್ಲಿ ನಡೆಯುವ ಕತೆಯನ್ನು ಸಿನಿಮಾ ಹೊಂದಿದೆ. ಅಂದಿನ ಕಾಲಘಟ್ಟವನ್ನು ಸೆಟ್‌ಗಳ ಮೂಲಕ ಮರುಸೃಷ್ಟಿ ಮಾಡಲಾಗುತ್ತಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!