ಕೆಲ ದಿನಗಳಿಂದ ಹರಡಿದ್ದ ರಾಜಕೀಯ ಪ್ರವೇಶದ ಸುದ್ದಿಯನ್ನು ನಟ ಡಾಲಿ ಧನಂಜಯ್ ತಳ್ಳಿ ಹಾಕಿದ್ದಾರೆ.
ಟ್ಟಟರ್ನಲ್ಲಿ ರಾಜಕೀಯ ಎಂಟ್ರಿ ಬಗ್ಗೆ ಸ್ಪಷ್ಣನೆ ನೀಡಿರುವ ಅವರು, ‘ನಾನು ಶೂಟಿಂಗ್ನಲ್ಲಿ ಎಷ್ಟು ಮುಳುಗಿ ಹೋಗಿದ್ದೀನಿ ಅಂದ್ರೆ, ನನಗೆ ಈ ತರ ಒಂದು ನ್ಯೂಸ್ ಆಗಿದೆ ಅನ್ನೋದೇ ಗೊತ್ತಾಗಿರಲಿಲ್ಲ. ಈ ವಿಷಯಕ್ಕೂ ನನಗೂ, ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕಲಾವಿದನಾಗಿ ಜನ ಸ್ವೀಕರಿಸಿ ಅಪ್ಪಿದ್ದಾರೆ. ನೂರಾರು ಪಾತ್ರಗಳ ಮೂಲಕ ಅಭಿಮಾನಿ ದೇವರುಗಳ ರಂಜಿಸುವ ಕೆಲಸವಷ್ಟೆ ನನ್ನದು’ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಡಾಲಿ ಧನಂಜಯ್ ಅರಸೀಕೆರೆ ಕ್ಷೇತ್ರದಿಂದ ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆ. ಜೆಡಿಎಸ್ ಪಕ್ಷದಿಂದ ಅರಸೀಕೆರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಅರಸೀಕೆರೆ ಕ್ಷೇತ್ರದ ಎಂಎಲ್ಸಿ ಆಗಿರುವ ಶಿವಲಿಂಗೇಗೌಡರ ಬದಲು ಧನಂಜಯ್ ಚುನಾವಣೆಗೆ ಇಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆ ಎಲ್ಲಾ ಊಹಾಪೋಹಗಳಿಗೆ ಧನಂಜಯ್ ಉತ್ತರ ನೀಡಿದ್ದಾರೆ.
ಹೆಚ್ಡಿ ದೇವೇಗೌಡ, ಹೆಚ್ಡಿ ಕುಮಾರಸ್ವಾಮಿ ಜೊತೆ ಅರಸೀಕೆರೆ ಎಂಎಲ್ಸಿ ಶಿವಲಿಂಗೇಗೌಡ ಮನಸ್ತಾಪ ಹೊಂದಿದ್ದು, ಅತೀ ಶೀಘ್ರದಲ್ಲಿ ಜೆಡಿಎಸ್ ಪಕ್ಷವನ್ನು ಶಿವಲಿಂಗೇಗೌಡ ತೊರೆಯಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಶಿವಲಿಂಗೇಗೌಡ ಬದಲಿಗೆ ಡಾಲಿ ಧನಂಜಯ್ ಅಖಾಡಕ್ಕಿಳಿಯುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.
ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿರುವ ಧನಂಜಯ್ ನಟನೆಯಲ್ಲಿ ಮುಂದುವರೆಯುವ ಇಚ್ಚೆ ವ್ಯಕ್ತಪಡಿಸಿದ್ದು ರಾಜಕೀಯ ಎಂಟ್ರಿ ತಳ್ಳಿ ಹಾಕಿದ್ದಾರೆ.
Be the first to comment