ಬರಲಿದೆ ಎಂ ಎಸ್ ಸುಬ್ಬುಲಕ್ಷ್ಮಿ ಬಯೋಪಿಕ್

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕದ ದಂತಕಥೆ ಎಂ ಎಸ್ ಸುಬ್ಬುಲಕ್ಷ್ಮಿ ಜೀವನ ಚರಿತ್ರೆಯನ್ನು ತೆರೆಮೇಲೆ ತರಲು ಸಜ್ಜಾಗಿದ್ದಾರೆ.

ಭಾರತ ರತ್ನ ಎಂಎಸ್‌ಸುಬ್ಬುಲಕ್ಷ್ಮಿ ಬಯೋಪಿಕ್ ರಾಕ್‌ಲೈನ್ ಎಂಟರ್‌ಟೈನ್ಮೆಂಟ್ ಸಂಸ್ಥೆ ಅಡಿಯಲ್ಲಿ ನಿರ್ಮಾಣ ಆಗಲಿದೆ.
ಈಗಾಗಲೇ ಸಿನಿಮಾ ಕಥೆ ಫೈನಲ್ ಆಗಿದೆ. ಎಂ ಎಸ್‌ ಸುಬ್ಬುಲಕ್ಷ್ಮಿಯವರ ಬಯೋಪಿಕ್‌ಗೆ ಸ್ಕ್ರೀನ್ ಪ್ಲೇ ಮಾಡಲಾಗುತ್ತಿದೆ. ಇದೇ ವೇಳೆ ಎಂಎಸ್‌ ಸುಬ್ಬುಲಕ್ಷ್ಮಿ ಪಾತ್ರಕ್ಕೆ ಸೂಕ್ತ ಎನಿಸುವ ನಟಿ ಹಾಗೂ ಉಳಿದ ಪಾತ್ರಗಳಿಗೆ ಕಲಾವಿದರ ಆಯ್ಕೆ ನಡೆಯುತ್ತಿದೆ ಎಂದು ರಾಕ್‌ಲೈನ್ ಹೇಳಿದ್ದಾರೆ.

ತಂತ್ರಜ್ಞರ ಬಗ್ಗೆ ರಾಕ್‌ಲೈನ್ ಯಾವುದೇ ವಿಷಯವನ್ನೂ ಬಿಟ್ಟುಕೊಟ್ಟಿಲ್ಲ. ಈ ಹಿಂದೆ ಎಂಎಸ್‌ ಸುಬ್ಬುಲಕ್ಷ್ಮಿ ಪಾತ್ರದಲ್ಲಿ ವಿದ್ಯಾಬಾಲನ್ ನಟಿಸಲಿದ್ದಾರೆ ಎಂದು ಸುದ್ದಿಯಾಗಿತ್ತು.

ರಾಕ್‌ಲೈನ್ ವೆಂಕಟೇಶ್ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ದಕ್ಷಿಣದ ಎಲ್ಲಾ ಭಾಷೆಗಳಲ್ಲೂ ಎಂಎಸ್‌ ಸುಬ್ಬಲಕ್ಷ್ಮಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಕಥೆ, ಚಿತ್ರಕಥೆ ಮುಗಿದು, ತಂತ್ರಜ್ಞರು ಹಾಗೂ ಕಲಾವಿದರ ಆಯ್ಕೆಯಾದ ಬಳಿಕ ಸಿನಿಮಾ ಅನೌನ್ಸ್ ಮಾಡಲು ರಾಕ್ ಲೈನ್ ತೀರ್ಮಾನಿಸಿದ್ದಾರೆ. ಅಲ್ಲಿವರೆಗೂ ಎಂ ಎಸ್ ಸುಬ್ಬುಲಕ್ಷ್ಮಿ ಬಯೋಪಿಕ್ ಬಗ್ಗೆ ಮಾಹಿತಿಗೆ ಕಾಯಬೇಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!