” ಭೀಮ” ಮೋಶನ್ ಪೋಸ್ಟರ್ ರಿಲೀಸ್

ದುನಿಯಾ ವಿಜಯ್ ನಟನೆಯ 28ನೇ ಸಿನಿಮಾ, ನಿರ್ದೇಶನದ ಎರಡನೇ ಚಿತ್ರದ ” ಭೀಮ” ದ ಟೈಟಲ್ ಮೋಶನ್ ಪೋಸ್ಟರ್ ರಿಲೀಸ್ ಆಗಿದೆ.

ಆನಂದ್ ಆಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು ಸಿನಿಮಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಭೀಮ ಚಿತ್ರದ ಮುಹೂರ್ತ ಏಪ್ರಿಲ್ 18ರಂದು ಬಂಡಿ ಮಕಳಮ್ಮ ದೇವಸ್ಥಾನದಲ್ಲಿ ನಡೆದಿತ್ತು. ಸಿನಿಮಾವನ್ನು ಶಿವಣ್ಣ ನಟಿಸುತ್ತಿರುವ ‘ಬೈರಾಗಿ’ ಸಿನಿಮಾದ ನಿರ್ಮಾಪಕ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಸಂಬಂಧಿಸಿದಂತೆ ರಕ್ತ ಕಲೆಗಳಾಗಿರುವ ಕೈ, ಯಮಹ ಆರ್‌ ಎಕ್ಸ್ 100 ಬೈಕ್ ಇರುವ ಅನೌನ್ಸ್‌ಮೆಂಟ್ ಪೋಸ್ಟರ್ ರಿಲೀಸ್ ಈ ಹಿಂದೆ ಆಗಿತ್ತು.

‘ಸಲಗ’ ಬಳಿಕ ದುನಿಯಾ ವಿಜಯ್‌ಗೆ ಆಫರ್‌ ಸಾಕಷ್ಟು ಹೆಚ್ಚಾಗಿವೆ. ಈ ನಡುವೆ ದುನಿಯಾ ವಿಜಯ್ ತೆಲುಗು ಚಿತ್ರರಂಗದ ಕಡೆ ಮುಖ ಮಾಡಿದ್ದು, ಬಾಲಕೃಷ್ಣ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಸಲಗ’ ಗೆದ್ದ ಬಳಿಕ ದುನಿಯಾ ವಿಜಯ್ ದುನಿಯಾ ವಿಜಯ್ ಈ ಸಿನಿಮಾದಲ್ಲಿ ನಟಿಸುವ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಹೊಸ ಪ್ರಯತ್ನಕ್ಕೆ ಕೈ ಹಾಕಬೇಕಾದ ಅನಿವಾರ್ಯತೆಗೆ ಸಿಲುಕಿದ ದುನಿಯಾ ವಿಜಯ್ ಸಲಗ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದರು. ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದ ದುನಿಯಾ ವಿಜಯ್ ಚೊಚ್ಚಲ ಪ್ರಯತ್ನದಲ್ಲಿ ಗೆದಿದ್ದರು. ಈಗ ಎರಡನೇ ಬಾರಿ ಸಿನಿಮಾ ನಿರ್ದೇಶನಕ್ಕೆ ಮುಂದಾಗಿರುವ ವಿಜಯ್ ಕುತೂಹಲ ಮೂಡಿಸಿದ್ದಾರೆ.

ಚಿತ್ರ ಆಕ್ಷನ್ ಓರಿಯಂಟೆಡ್ ಆಗಿರುವ ಸಾಧ್ಯತೆ ಇದ್ದು ನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕೆ ಹೊಸ ಪಾತ್ರ ಪರಿಚಯ ಆಗಿದ್ದು ಬ್ಲ್ಯಾಕ್ ಡ್ರಾಗನ್ ಮಂಜು ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.
_____

Be the first to comment

Leave a Reply

Your email address will not be published. Required fields are marked *

Translate »
error: Content is protected !!