KASTHURI MAHAL : “ಕಸ್ತೂರಿ ಮಹಲ್” ಸಿಂಗಲ್ ಟ್ರ್ಯಾಕ್ ರಿಲೀಸ್

ದಿನೇಶ್ ಬಾಬು ನಿರ್ದೇಶದನ 50ನೇ ಸಿನಿಮಾ ‘ಕಸ್ತೂರಿ ಮಹಲ್’ ನ ಸಿಂಗಲ್ ಟ್ರ್ಯಾಕ್ ಇಂದು ಬಿಡುಗಡೆ ಆಗಿದೆ.

ಅನುರಾಧಾ ಭಟ್ ಅವರು ಹಾಡಿರುವ ” ನಾ ಯಾರೋ ” ಹಾಡು ಇಂದು ಬಿಡುಗಡೆ ಆಗಿದ್ದು ಸಾವಿರಕ್ಕೂ ಹೆಚ್ಚು ಜನರು ಹಾಡನ್ನು ವೀಕ್ಷಣೆ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದು, ರಮೇಶ್ ಕೃಷ್ಣ ಸಂಗೀತ ನೀಡಿದ್ದಾರೆ.

ಈಗಾಗಲೇ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ. ಬಹುಭಾಷಾ ನಟಿ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿರುವ ಈ ಸಿನಿಮಾ ಮೇ 13ರಂದು ರಿಲೀಸ್ ಆಗಲಿದೆ.

ನಟಿ ಶಾನ್ವಿ ಅವರ ಪ್ರಕಾರ, ‘ಕನ್ನಡದಲ್ಲಿ ಸಾಕಷ್ಟು ಹಾರರ್ ಚಿತ್ರಗಳು ಬಂದಿವೆಯಾದರೂ ಇದು ವಿಭಿನ್ನ ಚಿತ್ರ ಆಗಿದೆ. ಚಿತ್ರೀಕರಣ ನಡೆದ ಕೊಟ್ಟಿಗೆಹಾರದ ಪರಿಸರ ಅದ್ಭುತವಾಗಿತ್ತು. ನನಗೆ ಉತ್ತಮ ಪಾತ್ರ ನೀಡಿರುವ ದಿನೇಶ್ ಬಾಬು ಅವರ ಬಗ್ಗೆ, ಅವರ ನಿರ್ದೇಶನದ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಎರಡೂವರೆ ವರ್ಷಗಳ ನಂತರ ನನ್ನ ಅಭಿನಯದ ಚಿತ್ರವೊಂದು ರಿಲೀಸ್ ಆಗುತ್ತಿದೆ” ಎಂದಿದ್ದಾರೆ.
ರಂಗಾಯಣ ರಘು ಅವರು ‘ಕಸ್ತೂರಿ ಮಹಲ್’ ಸಿನಿಮಾದಲ್ಲಿ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಸ್ಕಂದ ಅಶೋಕ್ ಸಹ ನಟಿಸಿದ್ದಾರೆ.

ನಿರ್ಮಾಪಕ ರವೀಶ್ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಬಿಗ್‌ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ‘ಕಸ್ತೂರಿ ಮಹಲ್’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ವತ್ಸಲಾ ಮೋಹನ್, ಕಾಶಿಮಾ, ನೀನಾಸಂ ಅಶ್ವತ್ಥ್‌ ಮುಂತಾದವರು ನಟಿಸಿದ್ದಾರೆ. ಹಿನ್ನೆಲೆ ಸಂಗೀತ ರಮೇಶ್ ಕೃಷ್ಣ ಅವರದ್ದು ಆಗಿದೆ. ಪಿಕೆಎಚ್ ದಾಸ್ ಅವರು ಛಾಯಾಗ್ರಹಣ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!