KGF Chapter 2 : 240 ಕೋಟಿ ಗಳಿಸಿದ ಕೆಜಿಎಫ್ 2

ಯಶ್ ನಟನೆಯ ‘ಕೆಜಿಎಫ್ 2’ ಚಿತ್ರ ಎರಡನೇ ದಿನಕ್ಕೆ ಸುಮಾರು 240 ಕೋಟಿ ರೂ. ಗಳಿಕೆ ಮಾಡಿದೆ.

ಇದು ಭಾರತದಾದ್ಯಂತ ಕಲೆ ಹಾಕಿರುವ ಮೊತ್ತ ಆಗಿದೆ. ಆದರೆ ವಿಶ್ವಾದ್ಯಂತ ಈ ಲೆಕ್ಕಾ ತೆಗೆದುಕೊಂಡರೆ ಇದು ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗಿದೆ.

ಮೊದಲ ದಿನ ‘ಕೆಜಿಎಫ್ 2′ ಸಿನಿಮಾ 134.5 ಕೋಟಿ ಗಳಿಕೆ ಮಾಡಿದೆ ಎಂದು ಹೊಂಬಾಳೆ ಫಿಲ್ಮ್ಸ್ ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್ ನೀಡಿತ್ತು.

ಕೆಜಿಎಫ್ 2’ ಹಿಂದಿ ಮಾರ್ಕೆಟ್‌ನಲ್ಲಿ ಭರ್ಜರಿಯಾಗಿ ಓಡುತ್ತಿದೆ. ಮೊದಲ ದಿನ ಈ ಸಿನಿಮಾ 53.95 ಕೋಟಿ ಗಳಿಸಿತ್ತು. ಎರಡನೇ ದಿನ 45 ಕೋಟಿ ಕಲೆಕ್ಷನ್ ಆಗಿದೆ ಎಂದು ಟ್ರೇಡ್ ವಿಶ್ಲೇಶಕರು ಹೇಳುತ್ತಿದ್ದಾರೆ. ‘ಕೆಜಿಎಫ್ 2’ ಮಾರ್ಕೆಟ್‌ನಲ್ಲಿ ಎರಡೇ ದಿನಕ್ಕೆ 100 ಕ್ಲಬ್ ಸೇರಿದೆ. ಬಾಲಿವುಡ್‌ ಚಿತ್ರಗಳನ್ನು ಹಿಂದಿಕ್ಕಿ ‘ಕೆಜಿಎಫ್ 2’ ದಾಖಲೆ ಮಾಡಿದೆ.

‘ಕೆಜಿಎಫ್ 2’ ಸಿನಿಮಾ ವಿಶ್ವದ ಹಲವೆಡೆ ರಿಲೀಸ್ ಆಗಿದೆ.0ಚಿತ್ರ ರಿಲೀಸ್ ಆಗಿರುವ ಕಡೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಅಮೆರಿಕದಲ್ಲಿ ‘ಕೆಜಿಎಫ್ 2’ ಎರಡೇ ದಿನಕ್ಕೆ 18 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಈ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!