ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನೆಮಾ ಕೆಜಿಎಫ್ ಚಾಪ್ಟರ್ -2 ಇಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ರಾಜ್ಯ ಎಲ್ಲ ಜಿಲ್ಲೆಗಳಲ್ಲೂ ಕೆಜಿಎಫ್ ಗೆ ಅದ್ಧೂರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಳ್ಳಾರಿ ನಗರದಲ್ಲೂ ಕೂಡ ಅಭಿಮಾನಿಗಳು ಕೆಜಿಎಫ್ ಚಾಪ್ಟರ್ -2 ಸಿನಿಮಾ ನೋಡಲು ರಾತ್ರಿಯಿಂದಲೇ ಕಾದು ಕುಳಿತರು. ಚಿತ್ರಮಂದಿರದೊಳಗೆ ತೆರಳುವಾಗ ನೂಕುನುಗ್ಗಲು ಉಂಟಾಗಿದೆ.
ಬಳ್ಳಾರಿ ನಗರದಲ್ಲಿ ರಾಕಿ ಭಾಯ್ ಅಭಿನಯದ ಕೆಜಿಎಫ್ ಚಾಪ್ಟರ್ -2 ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆ ನಾಲ್ಕು ಗಂಟೆಗೆ ಮೊದಲ ಮೊದಲ ಶೋ ಆರಂಭವಾಯಿತು.
ಏಕಕಾಲಕ್ಕೆ ಬಳ್ಳಾರಿಯ ಆರು ಚಿತ್ರ ಮಂದಿರಗಳಲ್ಲಿ ಕೆಜಿಎಫ್ ಚಾಪ್ಟರ್ -2 ಸಿನಿಮಾ ರಿಲೀಸ್ ಆಗಿದೆ. ಚಿತ್ರಕ್ಕಾಗಿ ಎರಡು ವರ್ಷಗಳಿಂದ ಕಾದಿದ್ದ ಯಶ್ ಅಭಿಮಾನಿಗಳು, ನೆಚ್ಚಿನ ನಟನನ್ನು ತೆರೆ ಮೇಲೆ ಕಂಡು ಕುಣಿದು ಸಂತಸಪಟ್ಟರು.
ಅಭಿಮಾನಿಗಳು ಸಿನಿಮಾ ಮಂದಿರಗಳೆದುರು ಪಟಾಕಿ ಸಿಡಿಸಿ ಸ್ವಾಗತಿಸಿದರು. ಅಭಿಮಾನಿಗಳು ಟಾಕೀಸ್ನೊಳಗೆ ತೆರಳುತ್ತಿದ್ದಾಗ ಕೆಲಕಾಲ ನೂಕುನುಗ್ಗಲು ಕಂಡು ಬಂತು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಲಾಠಿ ಹಿಡಿದು ಪರಿಸ್ಥಿತಿ ನಿಯಂತ್ರಿಸಿದರು.
ಬೆಂಗಳೂರಿನ ಮಾಗಡಿ ರಸ್ತೆಯ ವೀರೇಶ್ ಥಿಯೇಟರ್ ನಲ್ಲಿ ಕೆಜಿಎಫ್ ಚಾಪ್ಟರ್ ಎರಡರ ಬದಲಾಗಿ ಮೊದಲನೇ ಭಾಗ ಹಾಕಲಾಗಿತ್ತು. ಕೆಜಿಎಫ್ ಚಾಪ್ಟರ್ ಎರಡನೇ ಭಾಗ ನೋಡಲು ಬಂದ ಅಭಿಮಾನಿಗಳು ಮೊದಲ ಭಾಗ ಹಾಕಿರುವುದನ್ನು ನೋಡಿ ಆಕ್ರೋಶ ವ್ಯಕ್ತಪಡಿಸಿದರು. ಎಚ್ಚೆತ್ತ ಥಿಯೇಟರ್ ಸಿಬ್ಬಂದಿ ವೀಕ್ಷಕರಲ್ಲಿ ಕ್ಷಮೆ ಕೇಳಿ ಹೊಸ ಚಿತ್ರ ಪ್ರದರ್ಶನ ಮಾಡಿದರು.
ಕೆಜಿಎಫ್ ಚಾಪ್ಟರ್ ಮೊದಲ ಭಾಗ ಪ್ರದರ್ಶನ ಆಗಿದ್ದಕ್ಕೆ ಥಿಯೇಟರ್ ನಿಂದ ಹೊರ ಬಂದ ಅಭಿಮಾನಿಗಳು ಆಕ್ರೋಶ ಹೊರ ಹಾಕಿದರು. ಬೆಳಗ್ಗೆ 5 ಗಂಟೆಗೆ ಬಂದು ಥಿಯೇಟರ್ ಬಳಿ ನಿಂತಿದ್ದೇವೆ. ಸುಮಾರು 20 ನಿಮಿಷ ಚಾಪ್ಟರ್ 1 ಪ್ಲೇ ಮಾಡಲಾಗಿದೆ. ನಮ್ಮ ಸಮಯ ವ್ಯರ್ಥವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ತಾಂತ್ರಿಕ ಕಾರಣಗಳಿಂದ ಗೊಂದಲ ಉಂಟಾಗಿದೆ ಎಂದು ಕ್ಷಮೆ ಕೇಳಿದ ವೀರೇಶ್ ಚಿತ್ರಮಂದಿರದ ಸಿಬ್ಬಂದಿ 40 ನಿಮಿಷ ತಡವಾಗಿ ಹೊಸ ಚಿತ್ರ ಪ್ರದರ್ಶನ ಮಾಡಿದರು.
___
Be the first to comment