‘ಕೆಜಿಎಫ್ 2’ ಸಿನಿಮಾದ ಸಾಂಗ್ ಸುಲ್ತಾನ ರಿಲೀಸ್ ಆಗಿದ್ದು ಸೌಂಡ್ ಮಾಡುತ್ತಿದೆ.
ಸಿನಿಮಾ ಬಿಡುಗಡೆಗೆ ಒಂದು ದಿನ ಇರುವಾಗ ಚಿತ್ರತಂಡ ಸಾಂಗ್ ರಿಲೀಸ್ ಮಾಡಿದೆ. ಸಿನಿಪ್ರಿಯರಿಗೆ ಸುಲ್ತಾನ ಹಾಡಿನ ಲಿರಿಕ್ಸ್ ಸಾಂಗ್ ಕಿಕ್ ಕೊಡುವಲ್ಲಿ ಯಶಸ್ವಿ ಆಗಿದೆ.
ಸುಲ್ತಾನ ಹಾಡಿಗೆ ರವಿ ಬಸ್ರೂರು ಟ್ಯೂನ್ ಜೊತೆಗೆ ಸಾಹಿತ್ಯ ಕೂಡ ರಚಿಸಿದ್ದಾರೆ. ‘ ರಣ ರಣಧೀರ, ರುಧಿರೆಬ್ಬಿಸಿ ನಿಂತ ರಣಧೀರ’, ‘ಒಬ್ಬಂಟಿ ನಿಂತ ರಣಧೀರ’ ಈ ರೀತಿಯ ಕಿಚ್ಚಿನ ಶಬ್ದಗಳನ್ನು ಬಳಸಲಾಗಿದೆ. ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರು, ರವಿ ಬಸ್ರೂರು ಸೇರಿದಂತೆ ಹಲವು ಗಾಯಕರು ಹಾಡಿಗೆ ಧ್ವನಿ ನೀಡಿದ್ದಾರೆ.
5 ಭಾಷೆಯಲ್ಲಿ ಸುಲ್ತಾನ ಹಾಡು ಬಿಡುಗಡೆ ಆಗಿದೆ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಸಾಂಗ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಈ ಹಿಂದೆ ‘ಕೆಜಿಎಫ್ 2’ ಸಿನಿಮಾದ ‘ತೂಫಾನ್’ ಸಾಂಗ್ ಈಗಾಗಲೇ ಬಿಡುಗಡೆಯಾಗಿದೆ. ಈ ಹಾಡಿಗೂ ರವಿ ಬಸ್ರೂರು ಸಾಹಿತ್ಯ ರಚಿಸಿದ್ದರು.
ತೂಫಾನ್ ಸಾಂಗ್ ಕೂಡ ಸೂಪರ್ ಹಿಟ್ ಆಗಿದೆ. ಈ ಸಾಲಿಗೆ ಸುಲ್ತಾನ ಸೇರುವ ಎಲ್ಲ ಲಕ್ಷಣ ಕಂಡು ಬಂದಿದೆ.
ಈ ಹಾಡು ನಾಯಕನ ಇಂಟ್ರುಡಕ್ಷನ್ ಸಾಂಗ್ ಇದ್ದಂತೆ ಇದೆ. ನರಾಚಿ ಕೋಟೆಯೊಳಗೆ ರಾಕಿ ಭಾಯ್ ರಿ-ಎಂಟ್ರಿ, ಖದರ್, ಆರ್ಭಟ ಹೇಗಿದೆ? ಎನ್ನುವುದುನ್ನು ಈ ಹಾಡು ವಿವರಿಸಲಿದೆ.
__
Be the first to comment