ಮೇಯಲ್ಲಿ ಬಿಡುಗಡೆಗೆ ಸಾಲು ಸಾಲು ಚಿತ್ರಗಳು

ಬಹು ನಿರೀಕ್ಷಿತ ಕೆಜಿಎಫ್ 2 ಚಿತ್ರ ಏಪ್ರಿಲ್ ನಲ್ಲಿ ಬಿಡುಗಡೆ ಆಗಲಿದ್ದು ಇದರ ಬಳಿಕ ಮೇ ತಿಂಗಳಿನಲ್ಲಿ ಸಾಲು ಸಾಲು ಕನ್ನಡ ಚಿತ್ರಗಳು ಬಿಡುಗಡೆಗೆ ತಯಾರಾಗಿವೆ.

ಜಿಮ್ ರವಿ ನಟನೆಯ ಪುರುಷೋತ್ತಮ ಮೇ 6ರಂದು ಬಿಡುಗಡೆ ಆಗಲಿದೆ. ಇದು ಜಿಮ್ ರವಿ ನಾಯಕ ನಟ ಆಗಿರುವ ಚೊಚ್ಚಲ ಚಿತ್ರ ಆಗಿದೆ. ಅಮರನಾಥ್ ಚಿತ್ರದ ನಿರ್ದೇಶಕ. ಸಾಮಾಜಿಕ ಕಳಕಳಿ ಹೊಂದಿರುವ ಈ ಚಿತ್ರದಲ್ಲಿ ಜಿಮ್ ರವಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶರಣ್ ನಟನೆಯ ಅವತಾರ ಪುರುಷ ಮೇ 6ರಂದು ಬಿಡುಗಡೆ ಆಗಲಿದೆ. ಬಹು ತಾರಾಗಣವನ್ನು ಹೊಂದಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಆಶಿಕಾ ರಂಗನಾಥ್ ಅವರು ನಟಿಸಿದ್ದಾರೆ. ಸಾಯಿ‌ಕುಮಾರ್, ಸುಧಾರಾಣಿ, ಅಯ್ಯಪ್ಪ,ಭವ್ಯ, ಸಾಧುಕೋಕಿಲ, ಶ್ರೀನಗರ ಕಿಟ್ಟಿ‌ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

‘ಅವತಾರ ಪುರುಷ 1’ ಮತ್ತು ‘ಅವತಾರ ಪುರುಷ 2’ ಹೆಸರಿನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಎರಡೂ ಚಿತ್ರಗಳಿಗೆ ಟ್ಯಾಗ್‌ಲೈನ್ ಮಾತ್ರ ಬೇರೆ ಇಡಲಾಗುತ್ತಿದೆ. ಚಿತ್ರದ ಮೊದಲ ಭಾಗಕ್ಕೆ ಅಷ್ಟದಿಗ್ಬಂಧನ ಮಂಡಲಕ ಹಾಗೂ ಎರಡನೇ ಭಾಗಕ್ಕೆ ತ್ರಿಶಂಕು ಎನ್ನುವ ಟ್ಯಾಗ್‌ಲೈನ್ ಇಡಲಾಗಿದೆ ಎಂದು ಚಿತ್ರತಂಡ ಹೇಳಿದೆ.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೊರ್ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಲಿಯಮ್ ಡೇವಿಡ್ ಛಾಯಾಗ್ರಹಣದಲ್ಲಿ ಚಿತ್ರ ಮೂಡಿ ಬಂದಿದೆ. ಸಿನಿಮಾ ಹಾರರ್, ಕಾಮಿಡಿ, ಎಲಿಮೆಂಟ್ ಜೊತೆಗೆ ಥ್ರಿಲ್ಲಿಂಗ್ , ಸಸ್ಪೆನ್ಸ್ , ಟ್ವಿಸ್ಟ್ ಗಳ ಹೂರಣ ಹೊಂದಿದೆ.

ಇನ್ನೊಂದು ಕನ್ನಡ ಚಿತ್ರ ಶುಗರ್ ಲೆಸ್ ಕೂಡಾ ಮೇ 6ರಂದು ಬಿಡುಗಡೆ ಆಗಲಿದೆ.

ಮೇ 13ರಂದು ಕ್ರಿಟಿಕಲ್ ‌ಕೀರ್ತನೆಗಳು, ಮೇ 20ರಂದು ಗರುಡ, ಮೇ 29ರಂದು ಸಂಚಾರಿ ವಿಜಯ್ ನಟನೆಯ ಮೇಲೊಬ್ಬ ಮಾಯಾಯಿ ಚಿತ್ರ ಬಿಡುಗಡೆ ಆಗಲಿದೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರ ಬಿಡುಗಡೆ ಪಟ್ಟಿಗೆ ಸೇರ್ಪಡೆ ಆಗುವ ಸಾಧ್ಯತೆ ಇದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!