ಮ್ಯಾನ್ ಲಿಯೋ ಸಂಸ್ಥೆಯಲ್ಲಿ ನಿರ್ಮಾಣ ವಾಗಿರುವ, ಶಶಿಕುಮಾರ್, ದಿವ್ಯ ಚಂದ್ರಧರ ಹಾಗೂ ಯೋಗೇಶ್ ಕೆ. ಗೌಡ ಇವರ ಸಹ ನಿರ್ಮಾಣದಲ್ಲಿ, ನಾಗೇಂದ್ರ ಅರಸ್ ನಿರ್ದೇಶನದಲ್ಲಿ ಹಾಗೂ ಪ್ರಣವ ಸೂರ್ಯ ನಾಯಕ ನಾಗಿ ಅಭಿನಯಿಸಿರುವ “ಕಂಡ್ಹಿಡಿ ನೋಡನ” ಚಿತ್ರದ ಗೀತಾರ್ಪಣೆ.
ಶ್ರೀಧರ್ ಕಷ್ಯಪ್ ರಾಗ ಸಂಯೋಜನೆ ಮಾಡಿ ಅವರೇ ಹಾಡಿರುವ ಈ ಗೀತೆಗೆ ಸಾಹಿತ್ಯ ಬರೆದಿರುವವರು ಪ್ರಮೋದ್ ಆಚಾರ್ಯ. ಪ್ರಣವ ಸೂರ್ಯ ನಾಯಕನಾಗಿ ಹಾಗೂ ನಾಯಕಿಯಾಗಿ ಪ್ರಿಯಾಂಕ ಮಳಲಿ ಅಭಿನಯಿಸಿರುವ “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ಗೀತೆಗೆ ಭೂಷಣ್ ರವರು ನೃತ್ಯ ನಿರ್ದೇಶನ ಮಾಡಿದ್ದಾರೆ ಹಾಗೂ ಕಲಾ ನಿರ್ದೇಶನದ ಜವಾಬ್ದಾರಿಯನ್ನು ಮಹೇಶ ಹಾಗೂ ಮಲ್ಲಿ ನಿರ್ವಹಿಸಿರುವ ಈ ಗೀತೆಯನ್ನು ಇಂದು ಏ2 ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲಾಯ್ತು.
ಇತ್ತೀಚೆಗೆ ಉಪೇಂದ್ರರವರು ಚಿತ್ರದ ಪೋಷ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದರು.ಇದೇ ಏಪ್ರಿಲ್ 20ರಂದು ಟೀಸರ್ ಮತ್ತು ಮತ್ತೊಂದು ಗೀತೆಯನ್ನು ಬಿಡುಗಡೆ ಮಾಡಲಿದೆ ಚಿತ್ರ ತಂಡ.
ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡು ಬಿಡುಗಡೆಯ ತಯಾರಿಯಲ್ಲಿ ಚಿತ್ರ ತಂಡ ತೊಡಗಿಕೊಂಡಿದೆ.

Be the first to comment