ಗಳಿಕೆಯಲ್ಲಿ ಪಿಕೆ ಹಿಂದಿಕ್ಕಿದ ಆರ್ ಆರ್ ಆರ್

ರಾಜಮೌಳಿ ನಿರ್ದೇಶನದ ಜೂ. ಎನ್.ಟಿ.ಆರ್., ರಾಮ್ ಚರಣ್ ಅಭಿನಯದ ‘RRR’ ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ದಾಖಲೆ ಬರೆದಿದೆ.

ಈ ಚಿತ್ರ ಕೇವಲ 10 ದಿನಗಳಲ್ಲಿ ಬರೋಬ್ಬರಿ 900 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ಆರ್ ಆರ್ ಆರ್ ಚಿತ್ರ 10 ದಿನಗಳಲ್ಲಿ ವಿಶ್ವದಾದ್ಯಂತ 901.46 ಕೋಟಿ ರೂಪಾಯಿ ಗಳಿಸಿದೆ. ಚಿತ್ರ ಮೊದಲ ವಾರ 709 ರೂ. ಕಲೆಕ್ಷನ್ ಮಾಡಿದ್ದು, ಎರಡನೇ ವಾರದಲ್ಲಿಯೂ ಹೌಸ್ ಫುಲ್ ಪ್ರದರ್ಶನದೊಂದಿಗೆ ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ.

‘RRR’ ಬಾಕ್ಸ್ ಆಫೀಸ್‌ನಲ್ಲಿ ‘PK’ ನ ದಾಖಲೆ ಹಿಂದಿಕ್ಕಿದೆ. ಅಮೀರ್ ಖಾನ್ ಅಭಿನಯದ ‘ಪಿಕೆ’ ವಿಶ್ವಾದ್ಯಂತ ಪ್ರದರ್ಶನ ಕಂಡು ಸುಮಾರು 854 ಕೋಟಿ ರೂ. ಸಂಗ್ರಹಿಸಿತ್ತು ಎಂದು ವರದಿಯಾಗಿತ್ತು. 10 ನೇ ದಿನದ ನಂತರ ‘RRR’ ನ ಗಳಿಕೆ ವಿಶ್ವಾದ್ಯಂತ ಜೋರಾಗಿದೆ.

ಆರ್​ಆರ್​ಆರ್​’ ಚಿತ್ರದ ಪಾತ್ರಗಳು ತೆಲುಗು ಮೂಲದ್ದಾದರೂ ದೇಶಭಕ್ತಿಯ ಕತೆಯಾಗಿರುವುದರಿಂದ ಎಲ್ಲರಿಗೂ ಕನೆಕ್ಟ್ ಆಗುತ್ತಿದೆ. ಕುಟುಂಬ ಸಮೇತ ನೋಡುವ ಸಿನಿಮಾವಾಗಿರುವುದರಿಂದ ಜನರು ಚಿತ್ರಮಂದಿರಗಳಿಗೆ ಆಗಮಿಸಿ ಚಿತ್ರ ವೀಕ್ಷಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಆರ್‌ಆರ್‌ಆರ್‌’ ಚಿತ್ರ 1920ರ ದಶಕದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು, ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ ಆಗಿದೆ.

ಈ ಚಿತ್ರದಲ್ಲಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್, ಕೊಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!