ಮೇಯಲ್ಲಿ ‘ಗಂಧದ ಗುಡಿ’ ರಿಲೀಸ್ ಸಾಧ್ಯತೆ

ಪುನೀತ್ ರಾಜ್ ಕುಮಾರ್ ನಟನೆಯ ‘ಗಂಧದ ಗುಡಿ’ ಸಿನಿಮಾ ಮೇ ಕೊನೆಯ ವಾರದಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ.

ಪುನೀತ್ ರಾಜ್ ಕುಮಾರ್ ಅವರು ‘ಗಂಧದ ಗುಡಿ’ ಹೆಸರನ್ನಿಟ್ಟು ಸಿನಿಮಾಕ್ಕೆ ವಿಶೇಷ ಕಾಳಜಿ ವಹಿಸಿ ಕೆಲಸ ಮಾಡಿದ್ದಾರೆ. ಚಿತ್ರ ನೈಜವಾಗಿ ಮೂಡಿ ಬರಬೇಕು ಎಂದು ಎಲ್ಲಿಯೂ ಬಣ್ಣ ಹಚ್ಚದೆ ನಟಿಸಿದ್ದಾರೆ.ಈ ಸಿನಿಮಾದ ನಿರ್ದೇಶಕ ಅಮೋಘ ವರ್ಷ.

ಪುನೀತ್ ನಿಧನದ ಬಳಿಕ ‘ಗಂಧದ ಗುಡಿ’ಯ ಕೆಲಸವನ್ನು ಅವರ ಪತ್ನಿ ಅಶ್ವಿನಿ ಪಿಆರ್ ಕೆ ಪ್ರೊಡಕ್ಷನ್ ಮೂಲಕ ಸಾಕಾರಗೊಳಿಸುತ್ತಿದ್ದಾರೆ.

‘ಗಂಧದ ಗುಡಿ’ ಸಿನಿಮಾವನ್ನು ರಾಜ್ಯದ ನಾನಾ ಕಡೆಗಳ ಅರಣ್ಯಕ್ಕೆ ಭೇಟಿ ನೀಡಿ ಶೂಟ್​ ಮಾಡಲಾಗಿದೆ. ಇದರ ಟಟೀಸರ್ ನ್ನು ನವೆಂಬರ್​ 1ರ ಕನ್ನಡ ರಾಜ್ಯೋತ್ಸವದಂದು ರಿಲೀಸ್ ಮಾಡಬೇಕು ಎಂದು ಪುನೀತ್ ಕನಸು ಕಂಡಿದ್ದರು. ಆದರೆ ಅವರು ಅಕಾಲಿಕವಾಗಿ ಮೃತ ಪಟ್ಟರು.

ಡಿಸೆಂಬರ್ 6ರಂದು ಚಿತ್ರದ ಟೀಸರ್ ರಿಲೀಸ್ ಆಗಿದ್ದು ನೋಡುಗರಿಂದ ಮೆಚ್ಚುಗೆ ಪಡೆದಿದೆ. ‘ಗಂಧದ ಗುಡಿ’ ಸಿನಿಮಾ ರಿಲೀಸ್‌ಗೆ ಸಜ್ಜಾಗುತ್ತಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡುವುದು ಮಾತ್ರ ಬಾಕಿ ಇದೆ.

ಮಾರ್ಚ್ 17 ಅಪ್ಪು ನಟನೆಯ ‘ಜೇಮ್ಸ್’ ಸಿನಿಮಾ ರಿಲೀಸ್ ಆಗಿತ್ತು. ಚಿತ್ರಕ್ಕೆ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರ ಉತ್ತಮ ಕಲೆಕ್ಷನ್ ಮಾಡಿದೆ. ‘ಜೇಮ್ಸ್’ ಸಿನಿಮಾದ ಬಳಿಕ ಮುಂದೇನು ಎಂದು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ‘ಗಂಧದ ಗುಡಿ’ ಉತ್ತರ ನೀಡಲು ಸಿದ್ಧವಾಗಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!