ದಾಖಲೆ ಕಲೆಕ್ಷನ್ ಮಾಡಿದ ‘ಆರ್ ಆರ್ ಆರ್’

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಭರ್ಜರಿ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದ್ದು ರಿಲೀಸ್ ಆದ ಒಂದು ವಾರದಲ್ಲೇ 709 ಕೋಟಿ ರೂ. ಗಳ ಭರ್ಜರಿ ಗಳಿಕೆ ಮಾಡಿದೆ.

2015ರಲ್ಲಿ ರಿಲೀಸ್ ಆಗಿದ್ದ ರಾಜಮೌಳಿ ನಿರ್ದೇಶನದ ‘ಬಾಹುಬಲಿ1′ 650 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆ ದಾಖಲೆಯನ್ನು ಕೇವಲ ಏಳೇ ದಿನದಲ್ಲಿ ಈ ಚಿತ್ರ ಹಿಂದಕ್ಕೆ ಹಾಕಿದೆ.

ಆರ್​ಆರ್​ಆರ್​’ ಚಿತ್ರದ ಪಾತ್ರಗಳು ತೆಲುಗು ಮೂಲದ್ದಾದರೂ ದೇಶಭಕ್ತಿಯ ಕತೆಯಾಗಿರುವುದರಿಂದ ಎಲ್ಲರಿಗೂ ಕನೆಕ್ಟ್ ಆಗುತ್ತಿದೆ. ಕುಟುಂಬ ಸಮೇತ ನೋಡುವ ಸಿನಿಮಾವಾಗಿರುವುದರಿಂದ ಜನರು ಚಿತ್ರಮಂದಿರಗಳಿಗೆ ಆಗಮಿಸಿ ಚಿತ್ರ ವೀಕ್ಷಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಡುವೆ ಚಿತ್ರ ಪೈರೇಟ್ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ಆದರೆ ದೃಶ್ಯ ವೈಭವದಿಂದ ಕೂಡಿದ ಈ ಚಿತ್ರವನ್ನು ಪೈರೇಟ್ ಆಗಿ ನೋಡಿದರೆ ಮಜಾ ಸಿಗದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

‘ಆರ್‌ಆರ್‌ಆರ್‌’ ಚಿತ್ರ 1920ರ ದಶಕದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು, ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ ಆಗಿದೆ. ಈ ಚಿತ್ರದಲ್ಲಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್, ಕೊಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!