ನಟಿ ಆಲಿಯಾ ಭಟ್ ಅವರು ತಮ್ಮ ಪಾತ್ರವನ್ನು ಟ್ರಿಮ್ ಮಾಡಿದ ಕಾರಣಕ್ಕೆ RRR ನಿರ್ದೇಶಕ ರಾಜಮೌಳಿ ವಿರುದ್ಧ ಅಸಮಾಧಾನಗೊಂಡಿದ್ದಾರೆ.
RRR ಚಿತ್ರದ ಪೋಸ್ಟ್ ಡಿಲೀಟ್ ಮಾಡಿ, ನಿರ್ದೇಶಕ ರಾಜಮೌಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅನ್‌ಫಾಲೋ ಮಾಡಿದ್ದಾರೆ. RRR ಚಿತ್ರದಲ್ಲಿ ಆಲಿಯಾ ಪಾತ್ರವನ್ನು ಚಿಕ್ಕದಾಗಿಸಿದ್ದು ಆಲಿಯಾ ಕೆಂಗಣ್ಣಿಗೆ ಕಾರಣವಾಗಿದೆ. ತಮ್ಮ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ ಎನ್ನುವ ಕಾರಣಕ್ಕೆ ಆಲಿಯಾ ಅವರು ಚಿತ್ರತಂಡದ ವಿರುದ್ಧ ಮುನಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಆಲಿಯಾ ಭಟ್ ಪಾತ್ರವನ್ನು ಹೆಚ್ಚಾಗಿ ಚಿತ್ರೀಕರಿಸಲಾಗಿದ್ದರೂ, ಅದನ್ನು ಟ್ರಿಮ್ ಮಾಡಲಾಗಿದೆ. ಈ ವಿಚಾರ ಆಲಿಯಾ ಅವರಿಗೆ ಮೊದಲೆ ಗೊತ್ತಿರಲಿಲ್ಲ ಎನ್ನಲಾಗಿದೆ. ಚಿತ್ರವನ್ನು ದೊಡ್ಡ ಪರದೆ ಮೇಲೆ ನೋಡಿದಾಗಲೇ ತಮ್ಮ ಪಾತ್ರವನ್ನು ಟ್ರಿಮ್ ಮಾಡಿರುವು ತಿಳಿದು ಬಂದಿದೆ. ಈ ಕಾರಣದಿಂದ ಆಲಿಯಾ ಭಟ್ ಅವರು ರಾಜಮೌಳಿ ಬಗ್ಗೆ ಬೇಸರಗೊಂಡಿದ್ದಾರೆ ಎಂದು ಬಾಲಿವುಡ್‌ನಲ್ಲಿ ಸುದ್ದಿ ಹರಿದಾಡಿದೆ.
ಆಲಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದ ಪೋಸ್ಟ್‌ಗಳನ್ನು ಡಿಲಿಟ್ ಮಾಡಿದ್ದಾರೆ. ಸ್ಟೋರಿಯಲ್ಲಿ ಮಾತ್ರ ಒಂದು ಪೋಟೋ ಉಳಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ಆಲಿಯಾ ಭಟ್, ರಾಮ್ ಚರಣ್ ಅತ್ತೆ ಮಗಳಾಗಿ ಕಾಣಿಸಿಕೊಂಡಿದ್ದಾರೆ. ರಾಮ್‌ಚರಣ್ ಮತ್ತು ಜೂ.ಎನ್‌ಟಿಆರ್ ನಡುವೆ ಭಿನ್ನಾಭಿಪ್ರಾಯ ಬಂದಾಗ ಅದನ್ನು ತಿಳಿಗೊಳಿಸುವುದು, ಜೂ ಎನ್ ಟಿಆರ್ ಪಾತ್ರಕ್ಕೆ ಸತ್ಯ ಅರಿವಾಗುವಂತೆ ಮಾಡುವುದು ಆಲಿಯಾ ಭಟ್ ಪಾತ್ರ ಆಗಿದೆ.
ಆಲಿಯಾ ಭಟ್ ಪಾತ್ರ ಸಿನಿಮಾ ನೋಡಿದವರ ಮನಸ್ಸಲ್ಲಿ ಅಷ್ಟಾಗಿ ಉಳಿಯುವುದಿಲ್ಲ. ಬೆರಳೆಣಿಕೆಯ ದೃಶ್ಯಗಳಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ. ಚಿತ್ರದ ಫಸ್ಟ್ ಹಾಫ್‌ನಲ್ಲಿ ಒಂದು ದೃಶ್ಯದಲ್ಲಿ ಮಾತ್ರ ಆಲಿಯಾ ಕಾಣಿಸಿಕೊಳ್ಳುತ್ತಾರೆ. ಸೆಕೆಂಡ್ ಹಾಫ್‌ನಲ್ಲಿ ಆಗಾಗ ಬಂದು ಹೋಗುತ್ತಾರೆ. ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಪಾತ್ರಕ್ಕೆ ಅಷ್ಟು ಪ್ರಾಮುಖ್ಯತೆ ನೀಡಲಾಗಿಲ್ಲ.
RRR ಚಿತ್ರ ಮಾರ್ಚ್ 25ರಂದು ಬಿಡುಗಡೆ ಆಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಕೋಟಿಗಟ್ಟಲೆ ಹಣ ಬಾಚುತ್ತಿದೆ.
___
Be the first to comment