ಏಪ್ರಿಲ್ 29ಕ್ಕೆ ‘ಶೋಕಿವಾಲಾ’

ಅಜಯ್ ರಾವ್ ಮತ್ತು ಸಂಜನಾ ಆನಂದ್ ನಟನೆಯ ‘ಶೋಕಿವಾಲಾ’ ಸಿನಿಮಾ ಏಪ್ರಿಲ್ 29 ರಂದು ರಿಲೀಸ್ ಆಗಲಿದೆ.

ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಅಡಿಯಲ್ಲಿ ಟಿ.ಆರ್ ಚಂದ್ರಶೇಖರ್ ನಿರ್ಮಾಣದ ಪ್ರೇಮಕಥಾ ಹಂದರದ ಸಿನಿಮಾ ಬೇಸಿಗೆ ರಜೆಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ.

ಶೋಕಿವಾಲಾ ಗ್ರಾಮೀಣ ಹಿನ್ನೆಲೆಯಲ್ಲಿ ಮೂಡಿಬಂದಿದೆ. ಲವ್ ಯೂ ರಚ್ಚು ನಂತರ ಅಜಯ್ ರಾವ್ ನಟನೆಯ ನಂತರ ಶೋಕಿವಾಲಾ ರಿಲೀಸ್ ಆಗುತ್ತಿದೆ. ಅಜಯ್ ಹಳ್ಳಿಯ ಯುವಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಗುರು ದೇಶಪಾಂಡೆ ಮತ್ತು ಅಜಯ್ ರಾವ್ ನಡುವಣ ವೈಮನಸಿನ ಕಾರಣದಿಂದ ಲವ್ ಯೂ ರಚ್ಚು ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಅಜಯ್ ರಾವ್ ಪ್ರಿ ರಿಲೀಸ್ ಕಾರ್ಯಕ್ರಮದಿಂದ ದೂರ ಉಳಿಯುವ ಮೂಲಕ ನಿರ್ಮಾಪಕರ ಜೊತೆ ಮುನಿಸು ಮಾಡಿಕೊಂಡು ಸುದ್ದಿಯಾಗಿದ್ದರು. ಈ ಚಿತ್ರ ಅಜಯ್ ರಾವ್ ಅವರ ಕೈ ಹಿಡಿಯುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಚಿತ್ರದ ಬಹುತೇಕ ಚಿತ್ರೀಕರಣ ಮಂಡ್ಯ ಮತ್ತು ಚನ್ನಪಟ್ಟಣದಲ್ಲಿ ಮಾಡಲಾಗಿದೆ. ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಇದ್ದು, ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ , ಶಿವ ಸೀನ ಛಾಯಾಗ್ರಹಣವಿದೆ.
ಚಿತ್ರಕ್ಕೆ ಪ್ರೇಕ್ಷಕರು ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವುದು ಚಿತ್ರ ಬಿಡುಗಡೆಯಾದ ಬಳಿಕ ಗೊತ್ತಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!