ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರ 100 ಕೋಟಿ ರೂ. ಕಲೆಕ್ಷನ್ ನ ಕ್ಲಬ್ ಸೇರಿದೆ.
ಬಿಡುಗಡೆ ಆದ ನಾಲ್ಕು ದಿನಗಳಲ್ಲಿ, ಕೇವಲ ಚಿತ್ರಮಂದಿರಗಳಿಂದಲೇ ‘ಜೇಮ್ಸ್’ ಸಿನಿಮಾ ಗಳಿಕೆ 100 ಕೋಟಿ ದಾಟಿದೆ ಎಂದು ಚಿತ್ರ ವಿತರಕರು ಹೇಳಿದ್ದಾರೆ. ಕನ್ನಡ ಚಿತ್ರ ರಂಗದಲ್ಲಿ ಇದೊಂದು ದಾಖಲೆ ಆಗಿದೆ.
‘ಜೇಮ್ಸ್’ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭಾನುವಾರದಂದು ‘ಜೇಮ್ಸ್’ ಬಾಕ್ಸಾಫೀಸ್ ನಲ್ಲಿ 30 ಕೋಟಿಯಷ್ಟು ಗಳಿಕೆಯಲ್ಲಿ ಕಂಡಿದೆ. ನಾಲ್ಕು ದಿನಗಳಲ್ಲಿ 110 ಕೋಟಿ ರೂಪಾಯಿ ಗಳಿಕೆ ಕಂಡಿದೆ ಎಂದು ಅಂದಾಜು ಮಾಡಲಾಗಿದೆ.
ಜೇಮ್ಸ್ ಮೂಲಕ ಕನ್ನಡದ ಸಿನಿಮಾವೊಂದು ಅತೀ ವೇಗದಲ್ಲಿ 100 ಕೋಟಿ ರೂಪಾಯಿ ಗಳಿಸಿದ ಹೆಗ್ಗಳಿಕೆ ಪಡೆದಿದೆ. ಆಸ್ಟ್ರೇಲಿಯಾದಲ್ಲಿ 18 ಲಕ್ಷ, ಅಮೆರಿಕದಲ್ಲಿ 66 ಲಕ್ಷ ರೂಪಾಯಿ ಗಳಿಕೆ ಕಂಡಿದೆ. ಈ ವಾರಾಂತ್ಯದೊಳಗೆ ಸಿನಿಮಾ 150 ಕೋಟಿ ಕ್ಲಬ್ ಸೇರಿದರೂ ಅಚ್ಚರಿಯಿಲ್ಲ ಎಂದು ಹೇಳಲಾಗಿದೆ.
ಜೇಮ್ಸ್’ನಲ್ಲಿ ನಾಯಕಿಯಾಗಿ ತಮಿಳು ನಟಿ ಪ್ರಿಯಾ ಆನಂದ್ ನಟಿಸಿದ್ದಾರೆ. ‘ರಾಜಕುಮಾರ’ ಚಿತ್ರದಲ್ಲಿ ಪುನೀತ್ ತಂದೆಯಾಗಿ ಅಭಿನಯಿಸಿದ್ದ ಹಿರಿಯ ತಮಿಳು ನಟ ಶರತ್ ಕುಮಾರ್ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರಕ್ಕೆ ಎ. ಹರ್ಷ ಕೊರಿಯೋಗ್ರಫಿ, ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿ ನಿರ್ದೇಶಿಸಿದ್ದಾರೆ. ಕಿಶೋರ್ ಪತಿಕೊಂಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಚರಣ್ ರಾಜ್ ಸಂಗೀತ ಸಂಯೋಜನೆ, ಶ್ರೀಶ ಛಾಯಾಗ್ರಹಣ, ರವಿಸಂತೆ ಹೈಕ್ಲು ಕಲಾ ನಿರ್ದೇಶನ, ದೀಪು ಎಸ್.ಕುಮಾರ್ ಸಂಕಲನ ಇದೆ.
ಈ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು ಮತ್ತು ಮುಕೇಶ್ ರಿಷಿ ಸೇರಿದಂತೆ ದೊಡ್ಡ ತಾರಾಗಣ ನಟಿಸಿದೆ.
__
Be the first to comment