ಆರ್ ಆರ್ ಆರ್ ಮುಂಗಡ ಟಿಕೇಟ್ ಶುರು

ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಲನಚಿತ್ರದ ಮುಂಗಡ ಬುಕಿಂಗ್ ಭಾರತದಾದ್ಯಂತ ಇಂದು ಆರಂಭವಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒಟ್ಟು 3 ಗಂಟೆ 6 ನಿಮಿಷ ಇರುವ ಈ ಚಿತ್ರ U/A ಪ್ರಮಾಣ ಪತ್ರ ಹೊಂದಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು 550 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಮುಂಬೈ, ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಕಡೆ ಇಂದು ಬೆಳಗಿನಿಂದಲೇ ಸಿನಿಮಾದ ಬುಕಿಂಗ್ ಆರಂಭವಾಗಿದೆ. 3D ಹಿಂದಿ ಆವೃತ್ತಿಯ ಬೆಳಗಿನ ಪ್ರದರ್ಶನಕ್ಕೆ 500 ರೂ. ನಿಗದಿ ಪಡಿಸಲಾಗಿದೆ.
ಮುಂಬೈನಲ್ಲಿ 18 ಚಿತ್ರಮಂದಿರಗಳಲ್ಲಿ ಬುಕಿಂಗ್ ಆರಂಭ ಆಗಿದೆ. ದೆಹಲಿಯಲ್ಲಿ 20 ಚಿತ್ರಮಂದಿರ, ಅಹಮದಾಬಾದ್‌ನಲ್ಲಿ 6, ಕೋಲ್ಕತ್ತಾದಲ್ಲಿ 9 ಚಿತ್ರ ಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ.
ಹೈದರಾಬಾದ್‌ನ 5 ಥಿಯೇಟರ್‌ಗಳು ತೆಲುಗು ಆವೃತ್ತಿಯ 2D ಶೋ ಬುಕ್ಕಿಂಗ್ ಆರಂಭ ಆಗಿದೆ. ಚೆನ್ನೈನಲ್ಲಿ, 10 ಚಿತ್ರಮಂದಿರಗಳಲ್ಲಿ ತಮಿಳು 2D ಆವೃತ್ತಿಯ ಪ್ರದರ್ಶನ, 12 ಥಿಯೇಟರ್‌ಗಳಲ್ಲಿ ತಮಿಳು 3D ಆವೃತ್ತಿಯ ಪ್ರದರ್ಶನ ನಡೆಯಲಿದ್ದು ಬುಕ್ಕಿಂಗ್ ಸ್ಟಾರ್ಟ್ ಆಗಿದೆ.

ಬೆಂಗಳೂರಿನ ಮೂರು ಚಿತ್ರಮಂದಿರಗಳಲ್ಲಿ ತಲಾ 6 ಪ್ರದರ್ಶನಗಳ ಬುಕಿಂಗ್ ಆರಂಭವಾಗಿದೆ. ಚಿತ್ರ ಮಾರ್ಚ್ 25 ರಂದು ದೇಶದಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ಆರ್‌ಆರ್‌ಆರ್‌’ ಚಿತ್ರ 1920ರ ದಶಕದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು, ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ ಆಗಿದೆ. ಈ ಚಿತ್ರದಲ್ಲಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್, ಕೊಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ನೋಡುಗರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ.
_________

Be the first to comment

Leave a Reply

Your email address will not be published. Required fields are marked *

Translate »
error: Content is protected !!