ಮಾ.21ಕ್ಕೆ ಕೆಜಿಎಫ್2 ಮೊದಲ ಸಾಂಗ್ ರಿಲೀಸ್

ಕೆಜಿಎಫ್ 2 ಚಿತ್ರದ ತೂಫಾನ್ ಹಾಡು ಮಾರ್ಚ್‌ 21ರಂದು ಬೆಳಗ್ಗೆ 11.7ಕ್ಕೆ ರಿಲೀಸ್ ಆಗಲಿದೆ.

ಹೊಂಬಾಳೆ ಯೂಟ್ಯೂಬ್‌ನಲ್ಲಿ ಹಾಡು ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಏಕಕಾಲದಲ್ಲಿ ಐದು ಭಾಷೆಗಳಲ್ಲಿ ‘ತೂಫಾನ್‌…’ ಲಿರಿಕಲ್‌ ವಿಡಿಯೋ ಹಾಡು ಬಿಡುಗಡೆ ಆಗುತ್ತಿದ್ದು ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ.

ಕೆಜಿಎಫ್ ಚಿತ್ರದಲ್ಲಿ ರವಿ ಬಸ್ರೂರು ಅವರ ಸಂಗೀತ ಹಿಟ್​ ಆಗಿತ್ತು. ಕೆಜಿಎಫ್ 2ರ ಮೊದಲ ಸಾಂಗ್​ ಮೇಲೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ.
ವಿಜಯ್‌ ಕಿರಗಂದೂರು ನಿರ್ಮಾಣದ ಈ ಚಿತ್ರ ಏಪ್ರಿಲ್‌ 14ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.

ಯಶ್ ನಟನೆಯ ಚಿತ್ರ ದೇಶ- ವಿದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಪ್ರಶಾಂತ್‌ ನೀಲ್‌ ನಿರ್ದೇಶನದ ಕೆಜಿಎಫ್​ 2′ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಮಾರ್ಚ್​ 27ರಂದು ಸಿನಿಮಾದ ಟ್ರೇಲರ್ ರಿಲೀಸ್​ ಮಾಡುವ ಬಗ್ಗೆ ಚಿತ್ರತಂಡ ಈಗಾಗಲೇ ಘೋಷಣೆ ಮಾಡಿದೆ. ಭುವನ್‌ ಗೌಡ ಕ್ಯಾಮೆರಾ, ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿದೆ.

ಕೆಜಿಎಫ್: ಚಾಪ್ಟರ್ 2ನ್ನು ಏಪ್ರಿಲ್ 13ರಂದು ಪ್ರೀಮಿಯರ್‌ ಶೋ ನಡೆಸುವುದಾಗಿ ತಿಳಿಸಲಾಗಿದೆ. ಪ್ರೀಮಿಯರ್ ಶೊ ಉತ್ತರ ಅಮೇರಿಕಾದಲ್ಲಿ ನಡೆಯಲಿದೆ. ಈ ಕುರಿತು ಮಾಹಿತಿ ನೀಡಿರುವ ಹೊಂಬಾಳೆ ಫಿಲ್ಸ್ಮ್​, ‘ಉತ್ತರ ಅಮೆರಿಕ ನಾನು ಬರುತ್ತಿದ್ದೇನೆ. ಸಿಡಿಲಿನ ಅನುಭವ ಪಡೆಯಲು ತಯಾರಾಗಿ’ ಎಂದು ಟ್ವೀಟ್ ಮಾಡಿದೆ. ದಕ್ಷಿಣ ಭಾರತದಲ್ಲಿ ಪ್ರೀಮಿಯರ್ ಶೋವನ್ನು ಸರೆಗಮ ಸಿನಿಮಾಸ್ ಆಯೋಜನೆ ಮಾಡಲಿದೆ.

ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಯಶ್​ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಲಿವುಡ್​ ನ ಸಂಜಯ್ ದತ್, ರವೀನಾ ಟಂಡನ್ , ಪ್ರಕಾಶ್ ರಾಜ್, ಮಾಳವಿಕಾ, ಸರ್ಚನಾ ಜೋಯಿಸ್, ರಾವ್ ರಮೇಶ್, ಈಶ್ವರಿ ರಾವ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗ ಇದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!